ಎಮ್ಮೆಮ್ಮಾಡು: ತಾಜುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ ಎಮ್ಮೆಮ್ಮಾಡು ಇದರ ಅಧೀನದಲ್ಲಿ ಕಾರ್ಯಚರಿಸುವ ತಾಜುಲ್ ಉಲಮಾ ಸುನ್ನೀ ಸೆಂಟರ್ ಆಸ್ಥಾನ ಕಟ್ಟಡ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮವನ್ನು 2021 ಡಿಸೆಂಬರ್ 31 ರಂದು ಇಂಡಿಯನ್ ಗ್ರಾಂಡ್ ಮುಫ್ತಿ, ಬಹುಮಾನ್ಯರಾದ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ರವರು ದಿವ್ಯ ಹಸ್ತದ ಮೂಲಕ ಮರ್ಕಸ್ ಕ್ಯಾಂಪಸ್ ನಲ್ಲಿ ನೆರವೇರಿಸಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ಎಮ್ಮೆಮ್ಮಾಡು ತಾಜುಲ್ ಉಲಮಾ ಸುನ್ನೀ ಸೆಂಟರ್ ಸಮಿತಿ ಅಧ್ಯಕ್ಷರಾದ ಜನಾಬ್ ಅಬ್ದುಲ್ ಜಲೀಲ್ ನಿಝಾಮಿ, ಕಾರ್ಯದರ್ಶಿಯಾದ ಅಹಮದ್ (ಮಮ್ಮು) ಮಾಸ್ಟರ್, ಕೋಶಾಧಿಕಾರಿಯಾದ ಮುಸ್ತಫಾ, SYS ಕೊಡಗು ಜಿಲ್ಲಾ ಸಮಿತಿ ಸದಸ್ಯರಾದ ಮುಜೀಬ್, ಸಂಚಾಲಕರಾದ ಹಾರಿಸ್ ಮುಸ್ಲಿಯಾರ್, ಶೌಕತ್, ಶಹೀದಿಯ್ಯ, ಅನಾಥಾಲಯದ ಅಧ್ಯಕ್ಷರಾದ ಆಲ್ ಹಾಜ್ ಹಸೈನಾರ್ ಚಕ್ಕರ ,ಮುತ್ತುಕೋಯ ತಂಙಳ್ ಬಾಣಪೊರ,
ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಮಾಜಿ ಅಧ್ಯಕ್ಷರಾದ ಆಲ್ ಹಾಜ್ ಉಮ್ಮರ್ ಮುಸ್ಲಿಯಾರ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾದ ನರೂಟ್ ಆಲಿ, ಅಲ್ಲದೆ ಊರಿನ ಹಲವಾರು ಗಣ್ಯರು ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ನಿರ್ಮಾಣವಾಗಲಿರುವ ಕಟ್ಟಡವು, ಕೊಡಗು ಜಿಲ್ಲೆಯ ಸುನ್ನೀ ಸಮುದಾಯದ ಜನರ ಬಹುದೊಡ್ಡ ಕನಸಾಗಿದ್ದು, ಧಾರ್ಮಿಕ ಹಾಗೂ ಸಾಮಾಜಿಕ ಹಲವಾರು ಕಾರ್ಯಗಳಿಗೆ ಬಹಳ ಸಹಕಾರಿಯಾಗಲಿವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.