janadhvani

Kannada Online News Paper

ಜಿಫ್ರಿ ತಂಙಳರಿಗೆ ಅಗತ್ಯಬಿದ್ದರೆ ಪೋಲೀಸ್ ಸಂರಕ್ಷಣೆ- ಸಚಿವ ವಿ ಅಬ್ದುರಹ್ಮಾನ್

ಈಗ ಭದ್ರತೆ ಬೇಕಿಲ್ಲ, ಕೆಲ ದಿನಗಳ ಹಿಂದೆ ಬೆದರಿಕೆ ಹಾಕಲಾಗಿದ್ದು, ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಜಿಫ್ರಿ ಮುತ್ತುಕೋಯ ತಂಙಳ್ ಅವರು ಸಚಿವರಿಗೆ ತಿಳಿಸಿದರು.

ಕೋಝಿಕ್ಕೋಡ್,ಡಿ.28| ಸಮಸ್ತ ಅಧ್ಯಕ್ಷ ಜಿಫ್ರಿ ಮುತ್ತುಕೋಯ ತಂಙಳರಿಗೆ ಅವರ ಜೀವ ಬೆದರಿಕೆ ಸಂಬಂಧಿತ ಹೇಳಿಕೆಗೆ ಸಚಿವ ವಿ ಅಬ್ದುರಹ್ಮಾನ್ ಪ್ರತಿಕ್ರಿಯಿಸಿದ್ದಾರೆ. ಅಗತ್ಯಬಿದ್ದರೆ ಪೊಲೀಸ್ ರಕ್ಷಣೆ ನೀಡುವುದಾಗಿ ಹಾಗೂ ಸರ್ಕಾರದ ಎಲ್ಲ ಬೆಂಬಲವೂ ತಮಗಿದೆ ಎಂದು ಸಚಿವರು ಹೇಳಿದರು. ತಂಙಳರಿಗೆ ದೂರವಾಣಿ ಕರೆ ಮಾಡಿ ಸಚಿವರು ಸರ್ಕಾರಿ ಭದ್ರತೆಯ ಭರವಸೆ ನೀಡಿದರು.

ಆದರೆ, ಈಗ ಭದ್ರತೆ ಬೇಕಿಲ್ಲ ಎಂದು ತಂಙಳ್ ಸಚಿವರಿಗೆ ತಿಳಿಸಿದರು. ಕೆಲ ದಿನಗಳ ಹಿಂದೆ ಬೆದರಿಕೆ ಹಾಕಲಾಗಿದ್ದು, ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಜಿಫ್ರಿ ಮುತ್ತುಕೋಯ ತಂಙಳ್ ಅವರು ಸಚಿವರಿಗೆ ತಿಳಿಸಿದರು.

ಮಲಪ್ಪುರಂನ ಆನಕ್ಕಯಂ ಎಂಬಲ್ಲಿ ಸಮಸ್ತದ ಅಧೀನದ ಕಾಲೇಜಿನಲ್ಲಿ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿರುವ ಸಂದರ್ಭದಲ್ಲಿ ತಂಙಳ್ ರು ತಮಗೆ ಬೆದರಿಕೆಯ ಕರೆ ಬಂದ ಬಗ್ಗೆ ಬಹಿರಂಗಪಡಿಸಿದ್ದರು. ಚೆಂಬರಿಕ ಖಾಝಿಯವರ ಅನುಭವ ಉಂಟಾಗಲಿದೆ ಎಂದು ಅನಾಮಿಕ ಕರೆ ಬಂದಿತ್ತು ಎಂದ ತಂಙಳ್, ನಾನು ಯಾವುದೇ ಬೆದರಿಕೆಗೆ,ದಿಟ್ಟ ನಿಲುವಿನಿಂದ ಹಿಂದೆ ಸರಿಯುವವನಲ್ಲ ಎಂದು ಹೇಳಿದ್ದರು.

error: Content is protected !! Not allowed copy content from janadhvani.com