janadhvani

Kannada Online News Paper

ಕುವೈತ್ ಗೆ ಆಗಮಿಸುವವರು ಔಷಧಿಗಳನ್ನು ತರಬೇಡಿ- ಭಾರತೀಯ ರಾಯಭಾರಿ

ಮಾದಕ ದ್ರವ್ಯಗಳು ಎಂಬ ಶಂಕೆಯಲ್ಲಿ ಪ್ರಯಾಣಿಕರನ್ನು ಕನಿಷ್ಠ ದಿನಗಳ ಕಾಲ ಬಂಧನದಲ್ಲಿರಿಸಿದ ಅವಸ್ಥೆ ಉಂಟಾಗಿದೆ ಎಂದು ಅವರು ಹೇಳಿದರು.

ಕುವೈತ್ ಸಿಟಿ: ಭಾರತದಿಂದ ಕುವೈತ್ ಗೆ ಆಗಮಿಸುವವರು ಔಷಧಿಗಳನ್ನು ತರಬೇಡಿ ಎಂದು ಕುವೈತ್ ನಲ್ಲಿರುವ ಭಾರತೀಯ ರಾಯಭಾರಿ ಸಿಬಿ ಜಾರ್ಜ್ ಭಾರತೀಯರಿಗೆ ಸಲಹೆ ನೀಡಿದ್ದಾರೆ.

ಇತ್ತೀಚೆಗೆ ವಿವಿಧ ರೀತಿಯ ಔಷಧಿಗಳನ್ನು ಹೊಂದಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಭಾರತೀಯರು ಭಾರತದಿಂದ ಬರುವಾಗ ಕುವೈತ್ ಗೆ ಔಷಧಿಗಳನ್ನು ಕೊಂಡೊಯ್ಯಬಾರದು ಎಂದು ಅವರು ಹೇಳಿದರು.

ಮಾದಕ ದ್ರವ್ಯಗಳು ಎಂಬ ಶಂಕೆಯಲ್ಲಿ ಪ್ರಯಾಣಿಕರನ್ನು ಕನಿಷ್ಠ ದಿನಗಳ ಕಾಲ ಬಂಧನದಲ್ಲಿರಿಸಿದ ಅವಸ್ಥೆ ಉಂಟಾಗಿದೆ ಎಂದು ಅವರು ಹೇಳಿದರು. ಈ ಕಾರಣದಿಂದಾಗಿ, ಕುವೈತ್‌ಗೆ ಆಗಮಿಸುವ ಹೆಚ್ಚಿನ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ತಡೆದು ನಿಲ್ಲಿಸಲಾಗುತ್ತಿದೆ ಎಂದರು.

ಭಾರತದಲ್ಲಿ ನೀಡಲಾಗುವ ಎಲ್ಲಾ ಔಷಧಿಗಳು ಕುವೈತ್ ನಲ್ಲಿ ಲಭ್ಯವಿದ್ದು, ಭಾರತದಿಂದ ಔಷಧಿಗಳನ್ನು ತಂದು ವಿಮಾನ ನಿಲ್ದಾಣದಲ್ಲಿ ತೊಂದರೆ ಅನುಭವಿಸುವ ಅಗತ್ಯವಿಲ್ಲ ಎಂದು ಅವರು ಸೂಚಿಸಿದರು.

error: Content is protected !! Not allowed copy content from janadhvani.com