ಮಂಜೇಶ್ವರ: ಮಳ್’ಹರು ನೂರಿಲ್ ಇಸ್ಲಾಮಿತ್ತಅಲೀಮಿ ವಿದ್ಯಾ ಸಂಸ್ಥೆಯಲ್ಲಿ ಜ್ಞಾನಾರ್ಜನೆಗೈಯುತ್ತಿರುವ ವಿದ್ಯಾರ್ಥಿಗಳ ನಾಲ್ಕು ದಿನಗಳ ವಿದ್ಯಾರ್ಥಿ ಫೆಸ್ಟ್ ಅಲ್-ಖಲಂಗೆ ಅಮೋಘ ಚಾಲನೆ. ಸಂಜೆ ನಾಲ್ಕು ಗಂಟೆಗೆ ಸಯ್ಯಿದ್ ಅಬ್ದುರ್ರಹ್ಮಾನ್ ಶಹೀರ್ ಅಲ್-ಬುಖಾರಿ ಧ್ವಜಾರೋಹಣ ನೆರವೇರಿಸಿದರು.
ನಂತರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಹಸನ್ ಸಅದಿ ಅಲ್-ಅಫ್ಳಲಿ ಉಸ್ತಾದರು ಅಧ್ಯಕ್ಷತೆ ವಹಿಸಿದರು. ಮಳ್’ಹರ್ ವೈಸ್ ಚಯರ್’ಮಾನ್ ಸಯ್ಯಿದ್ ಅಬ್ದುರ್ರಹ್ಮಾನ್ ಶಹೀರ್ ಅಲ್-ಬುಖಾರಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಪ್ರಮುಖ ಮಾಪಿಳ ಹಾಡು ಗಾಯಕ ಮತ್ತು ಬರಹಗಾರರಾದ ಬಾಪು ವೆಳ್ಳಿಪ್ಪರಂಬ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಡಾ.ಮುಹಮ್ಮದ್ ಕುಂಞಿ ಸಖಾಫಿ ಕೊಲ್ಲಂ, ಯೂಸುಫ್ ಲತೀಫಿ ವಾಣಿಯಂಬಳಂ, ಕುಞಾಲಿ ಸಖಾಫಿ ಕೋಟೂರು ಪ್ರಭಾಷಣ ಗೈದರು. ಸಯ್ಯಿದ್ ಮುಸ್ತಫಾ ಸಿದ್ದೀಖಿ ಅಲ್-ಬುಖಾರಿ ಮಲಪ್ಪುರಂ, ಉಮರುಲ್ ಫಾರೂಖ್ ಮದನಿ ಮಚ್ಚಂಪಾಡಿ, ಶರೀಫ್ ಬಾಖವಿ, ಸಿದ್ದೀಕ್ ಸಅದಿ ತೌಡುಗೋಳಿ, ಅನಸ್ ಸಿದ್ದೀಕಿ ಚೆರ್ಕಳ, ಜಾಬಿರ್ ಸಖಾಫಿ ಕೋಡಂಬುಝ, ತ್ವಯ್ಯಿಬ್ ಸಅದಿ ಮಲಪ್ಪುರಂ, ರಊಫ್ ಮಿಸ್ಬಾಹಿ ಅಲ್-ಅಫ್’ಳಲಿ, ಅನ್ಸಾರ್ ಸಖಾಫಿ ಮಂಜನಾಡಿ, ನೌಫಲ್ ಸಖಾಫಿ ಪಾಣೆಮಂಗಳೂರು, ಸಯ್ಯಿದ್ ಶಕೀಲ್ ಅಲ್-ಹಾದಿ, ಹಸನ್ ಕುಂಞಿ, ಝಿಯಾದ್ ಮಾಸ್ಟರ್ ಮುಟ್ಟಂ, ನಂಶಾದ್ ಸರ್, ಮುಸ್ತಫಾ ಕಡಂಬಾರ್, , ಹಾರಿಸ್ ಹಾಜಿ ಝೇಗಂ, ಅದ್ದು ಹಾಜಿ ಮುಂತಾದವರು ಉಪಸ್ಥಿತರಿದ್ದರು.
ಸಯ್ಯಿದ್ ಮುಸ್ತಫಾ ಸಿದ್ದೀಖಿ ಅಲ್-ಬುಖಾರಿ ಪ್ರಾರ್ಥನೆಗೆ ನೇತೃತ್ವ ನೀಡಿದರು. ಝುಬೈರ್ ಸಖಾಫಿ ವಟ್ಟೋಳಿ ಸ್ವಾಗತ ಹಾಗೂ ಸಲೀಕ್ ಧನ್ಯವಾದ ಸಲ್ಲಿಸಿದರು. ಮುಂದುವರೆದು ಇನ್ನೂರಕ್ಕೂ ಮಿಕ್ಕ ಕಲಾ ಸ್ಪರ್ಧೆಗಳಲ್ಲಿ ಮುನ್ನೂರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಶನಿವಾರ, ಭಾನುವಾರ ದಿನಗಳಲ್ಲಿ ಭಾಗವಹಿಸಲಿದ್ದಾರೆ. ನಾಳೆ ಮಗ್ರಿಬ್ ನಮಾಝಿನ ಬಳಿಕ ವಿದ್ಯಾರ್ಥಿ ಫೆಸ್ಟ್ ಅಲ್-ಖಲಂನ ಸಮಾರೋಪ ಸಮಾರಂಭ ನಡೆಯಲಿದೆ…