ತಿರುವನಂತಪುರಂ: ಕೇರಳದ ಆಲಪ್ಪುಝ ಜಿಲ್ಲೆಯಲ್ಲಿ ಮತ್ತೆ ಹಕ್ಕಿ ಜ್ವರ ಪತ್ತೆಯಾಗಿದ್ದು, ಪರಿಣಾಮವಾಗಿ ಕೋಳಿ ಹಾಗೂ ಬಾತುಕೋಳಿಗಳನ್ನು ನಾಶಪಡಿಸಲು ತಂಡ ರಚಿಸಲಾಗಿದೆ. ರೈತರೊಬ್ಬರು ಸಾಕಿದ ಸಾವಿರಾರು ಬಾತುಕೋಳಿಗಳು ಸಾವನ್ನಪ್ಪಿದ ಬಳಿಕ ಹಕ್ಕಿ ಜ್ವರ ಪ್ರಕರಣ ಬೆಳಕಿಗೆ ಬಂದಿದೆ.
ಬಾತುಕೋಳಿಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಭೂಪಾಲ್ ನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್ ಗೆ ಮಾದರಿಗಳನ್ನು ಕಳುಹಿಸಲಾಗಿದ್ದು, ಬಾತುಕೋಳಿಗಳಲ್ಲಿ ಹಕ್ಕಿ ಜ್ವರ ಪತ್ತೆಯಾಗಿದೆ. ಹೀಗಾಗಿ ಕೇರಳ ಪಶುಸಂಗೋಪನೆ ಇಲಾಖೆ ತಕ್ಷಣದಲ್ಲಿ ಕ್ರಮಕೈಗೊಂಡಿದ್ದು, ಬಾತುಕೋಳಿ, ಕೋಳಿ ಹಾಗೂ ಮೊಟ್ಟೆಗಳನ್ನು ನಾಶಪಡಿಸಲು ಆದೇಶ ನೀಡಿದೆ.
ಬಾತುಕೋಳಿಗಳು, ಕೋಳಿಗಳು, ಮೊಟ್ಟೆಗಳು, ಗೊಬ್ಬರ ಮತ್ತು ಇತರ ಕೋಳಿಗಳ ಸಾಗಾಟವನ್ನು ನಿರ್ಬಂಧಿಸಲಾಗಿದೆ. ಕೇರಳದಲ್ಲಿ ಈ ವರ್ಷದಲ್ಲಿ ಎರಡನೇ ಬಾರಿಗೆ ಹಕ್ಕಿ ಜ್ವರ ದೃಢಪಟ್ಟಿದೆ.







