janadhvani

Kannada Online News Paper

ಇಮಾಮ್ ಹಾಗೂ ಮುಅದ್ದಿನ್ ಗಳ ಗೌರವ ಧನವನ್ನು ಅವರಿಗೆ ಬಿಟ್ಟುಬಿಡಿ – ಶಾಫಿ ಸಅದಿ

ಬ್ರಹ್ಮಾವರ: ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಸಮಿತಿಯು ಹಮ್ಮಿಕೊಂಡ ಜಮಾಅತ್ ಅದಾಲತ್ ಎಂಬ ವಿಶೇಷ ಕಾರ್ಯಕ್ರಮವು ಬ್ರಹ್ಮಾವರ ಬಂಟರ ಭವನದಲ್ಲಿ ಸಮಿತಿಯ ಅಧ್ಯಕ್ಷ ಬಿ ಎಸ್ ಎಫ್ ರಫೀಕ್ ಗಂಗೊಳ್ಳಿ ರವರ ಅಧ್ಯಕ್ಷತೆಯಲ್ಲಿ ಜರಗಿತು
ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ರವರು ದುಆ ದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಅಬ್ದುಲ್ ಹಮೀದ್ ಬಜ್ಪೆ ಸಮುದಾಯ ಎದುರಿಸುತ್ತಿರುವ ಸವಾಲುಗಳು ಎಂಬ ವಿಷಯದಲ್ಲಿ ವಿಷಯ ಮಂಡಿಸಿದರು, ರಾಜ್ಯ ವಕ್ಫ್ ಮಂಡಳಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ಕೆ ಮುಹಮ್ಮದ್ ಶಾಫಿ ಸಅದಿ ಬೆಂಗಳೂರು ರವರನ್ನು ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು
ಸನ್ಮಾನವನ್ನು ಸ್ವೀಕರಿಸಿದ ಬಳಿಕ ಜಮಾಅತ್ ಅದಾಲತ್ ನ ನೇತೃತ್ವವನ್ನು ವಹಿಸಿ ಮಾತನಾಡಿದ ಶಾಫಿ ಸಅದಿ ಕರ್ನಾಟಕ ವಕ್ಫ್ ಬೋರ್ಡ್ ಇಮಾಮ್ ಹಾಗೂ ಮುಅದ್ದಿನ್ ಗಳಿಗೆ ನೀಡುವ ಗೌರವ ಧನವನ್ನು ಅವರಿಗೆ ಬಿಟ್ಟುಬಿಡಿ ಅದನ್ನು ಆಡಳಿತ ಮಂಡಳಿ ತಿಂಗಳ ವೇತನಕ್ಕೆ ಸೇರಿಸ ಕೂಡದು, ಅದು ಗೌರವಧನವಾಗಿದೆ ಅದನ್ನು ತಡೆಹಿಡಿಯುವ ಜಮಾಅತ್ ನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು
ಕ್ಷುಲ್ಲಕ ಕಾರಣಕ್ಕಾಗಿ ಜಮಾಅತ್ ಗಳನ್ನು ಒಡೆಯುವ ಕೆಲಸ ಸರಿಯಲ್ಲ, ಕೂತು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು, ವಕ್ಫ್ ಬೋರ್ಡ್ ಹಾಗೂ ಇನ್ನಿತರ ಇಲಾಖೆಗಳಿಂದ ಸಿಗುವ ಸೌಲಭ್ಯಗಳನ್ನು ಪಡೆದು ಮಸೀದಿ,ಮದ್ರಸ ಮುಂತಾದ ಧಾರ್ಮಿಕ ಕ್ಷೇತ್ರಗಳನ್ನು ಅಭಿವೃದ್ಧಿ ಗೊಳಿಸಲು ಮುಂದಾಗಬೇಕು ಎಂದು ಶಾಫಿ ಸಅದಿ ಕೆರೆ ನೀಡಿದರು.

ಸುನ್ನೀ ಸಂಯುಕ್ತ ಜಮಾಅತ್, ಎಸ್ ಜೆ ಎಂ, ಎಸ್ ವೈ ಎಸ್, ಎಸ್ಸೆಸ್ಸೆಫ್, ಎಸ್ ಡಿ ಐ, ಎಸ್ ಎಮ್ ಎ ಮುಂತಾದ ಜಿಲ್ಲಾ ಸಂಘಟನೆಗಳಿಂದ ವಕ್ಫ್ ಬೋರ್ಡ್ ನೂತನ ಅಧ್ಯಕ್ಷರನ್ನು ಸನ್ಮಾನಿಸಿದರು
ರಾಜ್ಯ ಮುಸ್ಲಿಂ ಜಮಾಅತ್ ಸದಸ್ಯ ಉಡುಪಿ ಜಿಲ್ಲಾ ಎಸ್ ವೈ ಎಸ್ ಪ್ರಧಾನ ಕಾರ್ಯದರ್ಶಿ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕರ್ನಾಟಕ ಮುಸ್ಲಿಂ ಜಮಾಅತ್ ನ ಸದಸ್ಯತ್ವ ಅಪೇಕ್ಷೆ ಪತ್ರವನ್ನು ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾಫಿ ಸಅದಿ ಜಿಲ್ಲೆಯ ಸರ್ವ ತಾಲೂಕು ನಾಯಕರಿಗೆ ವಿತರಿಸಿದರು
ಅಸ್ಸಯ್ಯಿದ್ ಜುನೈದ್ ಅರ್ರಿಫಾಯಿ ತಂಙಳ್, ಸುನ್ನೀ ಕೋ-ಓಡಿನೇಷನ್ ಅಧ್ಯಕ್ಷ ಅಬ್ದುರ್ರಹ್ಮಾನ್ ಮದನಿ ಮೂಳೂರು, ಉಲಮಾ ನಾಯಕ ಬಿ ಎ ಇಸ್ಮಾಯಿಲ್ ಮದನಿ, ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಪಿ ಅಬೂಬಕ್ಕರ್ ನೇಜಾರು, ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಹಾಜಿ ಕೆ ಪಿ ಇಬ್ರಾಹಿಂ ಮಟಪಾಡಿ, ಎಸ್ ವೈ ಎಸ್ ಜಿಲ್ಲಾಧ್ಯಕ್ಷ ಅಡ್ವಕೆಟ್ ಹಂಝತ್ ಹೆಜಮಾಡಿ,ಎಸ್ ಜೆ ಎಂ ಜಿಲ್ಲಾಧ್ಯಕ್ಷ ಅಬ್ದುರ್ರಝಾಕ್ ಖಾಸಿಮಿ, ಎಸ್ ಡಿ ಐ ಜಿಲ್ಲಾಧ್ಯಕ್ಷ ಸಯ್ಯದ್ ಫರೀದ್ ಉಡುಪಿ, ಎಸ್ ಎಮ್ ಎ ಜಿಲ್ಲಾಧ್ಯಕ್ಷ ಮನ್ಸೂರ್ ಕೋಡಿ, ಎಸ್ಸೆಸ್ಸೆಫ್ ಜಿಲ್ಲಾ ಉಪಾಧ್ಯಕ್ಷ ಕೆ ಎಸ್ ಎಮ್ ಮನ್ಸೂರ್ ದೊಡ್ಡಣಗುಡ್ಡೆ, ಕಾರ್ಯಕ್ರಮ ಉಸ್ತುವಾರಿ ಜೆ ಮುಷ್ತಾಕ್ ಝೈಕಾ,ಜಿಲ್ಲಾ ಮುಸ್ಲಿಂ ಜಮಾಅತ್ ಉಪಾಧ್ಯಕ್ಷರಾದ ಮುಹಮ್ಮದ್ ಗೌಸ್ ಕಾರ್ಕಳ, ಶೇಖ್ ಮುಹಮ್ಮದ್ ನಯೀಮ್ ಕಟಪಾಡಿ ಹಾಗೂ ಮತ್ತಿತರ ನಾಯಕರು ಉಪಸ್ಥಿತರಿದ್ದರು
ಕಾರ್ಯದರ್ಶಿ ವೈ ಬಿ ಸಿ ಬಶೀರ್ ಅಲಿ ಮೂಳೂರು ಸ್ವಾಗತಿಸಿದರು,ಕಾರ್ಯಾಧ್ಯಕ್ಷ ಸುಬ್ಹಾನ್ ಅಹ್ಮದ್ ಹೊನ್ನಾಳ ಕಾರ್ಯಕ್ರಮ ನಿರೂಪಿಸಿದರು, ಸಂಘಟನಾ ಕಾರ್ಯದರ್ಶಿ ಕೆ ಎಂ ಇಲ್ಯಾಸ್ ನಾವುಂದ ವಂದಿಸಿದರು.

error: Content is protected !! Not allowed copy content from janadhvani.com