ಬೆಂಗಳೂರು: ಇಂದು ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 1 ನೇ KTA ಟೇಕ್ವಾಂಡೋ ಚಾಂಪಿಯನ್‌ಶಿಪ್ ನಲ್ಲಿ ಚಿನ್ನದ ಪದಕವನ್ನು ಗೆದ್ದಿರುವ, ಮರವೂರಿನ ಮರ್ಹೂಂ ಉಸ್ಮಾನ್ ಹಂಡೇಲ್ ಅವರ ಮೊಮ್ಮಗನಾದ ಮುಹಮ್ಮದ್ ಮುಸ್ತಫಾ S/O ಫರ್ವೇಝ್ ನ್ನು ಕುಟುಂಬಸ್ಥರು ಅಭಿನಂದಿಸಿದ್ದಾರೆ.

ಇಂದಿನ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಟೇಕ್ವಾಂಡೋಗಾಗಿ ಎಕ್ಸ್‌ಟ್ರೀಮ್ ಫೈಟ್ ಕ್ಲಬ್ ವಿದ್ಯಾರ್ಥಿಗಳು ಪ್ರತಿನಿಧಿಸಿದರು.
ಪೂಮ್ಸೇ ಮತ್ತು ಕ್ಯೋರುಗಿ(Fight) ಸ್ಪರ್ಧೆಗಳಲ್ಲಿ 4 ಚಿನ್ನ ಮತ್ತು 1 ಕಂಚನ್ನು ತಮ್ಮದಾಗಿಸಿಕೊಂಡರು.
ಪೂಮ್ಸೇ :
1. ಎಂ.ಮಿಶಾಲ್- ಚಿನ್ನ
2.ಎಂ.ರಿಯಾನ್- ಕಂಚು
ಕ್ಯೋರುಗಿ {ಫೈಟ್}
1.ಎಂ.ರೈಫ್ (ಯು-8 ವರ್ಷ) ಚಿನ್ನ
2.ಎಂ.ಮುಸ್ತಫಾ (ಯು-10 ವರ್ಷ) ಚಿನ್ನ
3.ಫೈಜಲ್ {ಯು-12ವರ್ಷ) ಚಿನ್ನ







