ಕೋಝಿಕ್ಕೋಡ್: ಚೇಳಾರಿ ವಿಭಾಗದ ಸಮಸ್ತ ಅಧ್ಯಕ್ಷ ಜಿಫ್ರಿ ಮುತ್ತುಕೋಯ ತಂಙಳ್, ವಕ್ಫ್ ಮಂಡಳಿಯ ನೇಮಕವನ್ನು ಪಿಎಸ್‌ಸಿಗೆ ಬಿಟ್ಟುಕೊಡುವ ಕುರಿತು ಮಸೀದಿಗಳಲ್ಲಿ ಪ್ರತಿಭಟನೆ ನಡೆಸಬಾರದು ಎಂದಿದ್ದಾರೆ.
ಇದು ಅಪಾಯಕಾರಿ, ಮಸ್ಜಿದ್ ಅತ್ಯಂತ ಗೌರವಾನ್ವಿತ ಸ್ಥಳವಾಗಿದೆ,ಅದು ಧರ್ಮದ ಸಂಕೇತವಾಗಿದೆ, ಮಸೀದಿಯ ಗೌರವಕ್ಕೆ ಕುಂದುಂಟಾಗುವಂಥಾ ಅಥವಾ ಅಪವಿತ್ರಗೊಳಿಸುವ ಯಾವ ಕಾರ್ಯವೂ ನಡೆಯಬಾರದು ಎಂದು ತಂಙಳ್ ಹೇಳಿದರು. ಸಮಸ್ತ ಕೇರಳ ಜಮ್ಇಯ್ಯತುಲ್ ಉಲಮಾ ಇನ್ನೂ ಈ ಬಗ್ಗೆ ಪ್ರತಿಭಟನೆಯನ್ನು ಯೋಜಿಸಿಲ್ಲ. ಮಸೀದಿಗಳಲ್ಲಿ ಎಲ್ಲವನ್ನೂ ಪ್ರತಿಭಟಿಸಲು ಸಾಧ್ಯವಿಲ್ಲ ಎಂದರು.
ಅವರು ಕೋಝಿಕ್ಕೋಡ್‌ನಲ್ಲಿ ಮುತವಲ್ಲಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಪೊಲೀಸರು ಮುಜಾಹಿದ್ದೀನ್ ಮತ್ತು ಜಮಾತ್-ಎ-ಇಸ್ಲಾಮಿ ವಿಚಾರವಾದಿಗಳನ್ನು ಸಂಪರ್ಕಿಸಿದಾಗ, ಅವರು ಮಸೀದಿಯಲ್ಲಿ ಪ್ರತಿಭಟನೆಗೆ ಕರೆ ನೀಡಿಲ್ಲ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ. ಹಾಗಾದ್ರೆ, ಪ್ರತಿಭಟನಾಕಾರರು ಸುನ್ನಿಗಳು ಎಂದು ಅಂದಾಜಿಸಲಾಗುತ್ತದೆ.
ಷರಿಯಾ ಕಾನೂನಿಗೆ ವಿರುದ್ಧವಾದ ರೀತಿಯಲ್ಲಿ ವಕ್ಫ್ ಆಸ್ತಿಗಳನ್ನು ಈಗ ಹಲವೆಡೆ ನಿರ್ವಹಿಸಲಾಗುತ್ತಿದೆ.
ವಕ್ಫ್ ಸಾಧಕರು ಹೇಳಿರುವ ಪ್ರಕಾರ ಅನೇಕ ವಕ್ಫ್ ಆಸ್ತಿಗಳನ್ನು ನಿರ್ವಹಿಸಲಾಗಿಲ್ಲ. ನವೀನವಾದಿಗಳು ವಕ್ಫ್ ಮಂಡಳಿಗೆ ಬಂದಾಗ ಇಂತಹ ಅನೇಕ ಸಂಗತಿಗಳು ಸಂಭವಿಸಿದವು. ಸುನ್ನಿಗಳಿಗೆ ಸೇರಿದ ಹಲವು ವಕ್ಫ್ ಆಸ್ತಿಗಳನ್ನು ಕಳೆದುಕೊಂಡಿದ್ದಾರೆ. ವಕ್ಫ್ ಆಸ್ತಿ ಅತ್ಯಂತ ಪವಿತ್ರ ಆಸ್ತಿಯಾಗಿದೆ ಎಂದರು.
ವಕ್ಫ್ ಮಂಡಳಿಯ ನೇಮಕಾತಿ ಕುರಿತು ಉಂಟಾಗಿರುವ ಗೊಂದಲದ ಬಗ್ಗೆ ಚರ್ಚಿಸಲು ಸಿದ್ಧ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಮುಖ್ಯಮಂತ್ರಿಗಳು ಅತ್ಯಂತ ಸೌಜನ್ಯಯುತವಾಗಿ ಪ್ರತಿಕ್ರಿಯಿಸಿದ್ದಾರೆ. ಮುಖ್ಯಮಂತ್ರಿ ಜತೆ ಮಾತುಕತೆ ನಡೆಸಿದ ನಂತರವಷ್ಟೇ ಸಮಸ್ತದ ಪ್ರತಿಭಟನೆ ಬಗ್ಗೆ ತೀರ್ಮಾನಿಸಲಾಗುವುದು. ಚರ್ಚೆಯಲ್ಲಿ ಪರಿಹಾರ ಸಿಗದಿದ್ದರೆ ಮಾತ್ರ ಪ್ರತಿಭಟನೆ ನಡೆಸಲಾಗುವುದು.
ಜಿಫ್ರಿ ಮುತ್ತುಕೋಯ ತಂಙಳ್ ಅವರ ಹೇಳಿಕೆಯು, ಸಮಸ್ತ ಸೇರಿದಂತೆ ಎಲ್ಲಾ ಸಂಘಟನೆಗಳು ಮಸೀದಿಗಳಲ್ಲಿ ಪ್ರತಿಭಟಿಸುತ್ತವೆ ಎಂಬ ಮುಸ್ಲಿಂ ಲೀಗ್‌ನ ನಿಲುವಿಗೆ ವಿರುದ್ಧವಾಗಿದೆ. ಮಸೀದಿಗೆ ಸಂಬಂಧಿಸಿದ ವಿಷಯಗಳನ್ನು ಮಸೀದಿಯೊಳಗೆ ಚರ್ಚಿಸುವೆವು ಎಂಬ ಲೀಗ್‌ನ ಮತ್ತು ಇಕೆ ವಿಭಾಗದ ಕೆಲವು ನಾಯಕರ ನಿಲುವಿಗೆ ಭಾರೀ ಹಿನ್ನಡೆಯಾಗಿದೆ.
ನಾಳೆ ಮಸೀದಿಗಳಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಸುನ್ನಿಗಳು ಇರುವುದಿಲ್ಲ ಎಂಬುದು ಸ್ಪಷ್ಟವಾಗಿರುವುದರಿಂದ ಲೀಗ್ ಮುಂದೇನು ಮಾಡುತ್ತದೆ ಎಂದು ಎಲ್ಲರೂ ಕಾದು ನೋಡುತ್ತಿದ್ದಾರೆ.