ಕಣ್ಣೂರು, ನ.16: ಖ್ಯಾತ ಮಾಪಿಲ ಗೀತೆ ಗಾಯಕ ಪೀರ್ ಮುಹಮ್ಮದ್ (78) ವಿಧಿವಶರಾಗಿದ್ದಾರೆ. ಪೀರ್ ಮುಹಮ್ಮದ್ ಅವರು ಕಾಫ್ ಮಲಕಂಡ ಪೂಂಕಾಟ್ಟೆ, ಒಟ್ಟಗಙ್ಙಳ್ ವರಿ ವರಿ ವರಿಯಾಯಿ, ಅಝಗೇರುನ್ನೋಳೆ, ನಿಸ್ಕಾರ ಪಾಯ ನನಞ್ಞು ಮುಂತಾದ ಹಿಟ್ ಹಾಡುಗಳನ್ನು ಸಂಯೋಜಿಸಿ,ಹಾಡಿದ್ದಾರೆ.
ಪೀರ್ ಮುಹಮ್ಮದ್ ಅವರು ಜನವರಿ 8, 1945 ರಂದು ತಮಿಳುನಾಡಿನ ತೆಂಕಶಿ ಬಳಿಯ ಸುರಂದೈ ಗ್ರಾಮದಲ್ಲಿ ಜನಿಸಿದರು. ಅವರ ತಾಯಿ ಬಲ್ಕೀಸ್, ತೆಂಗಿನ ಕೃಷಿಕರು. ತಲಶ್ಶೇರಿ ಮೂಲದ ಅಜೀಜ್ ಅಹಮದ್ ತಂದೆ. ಅವರು ನಾಲ್ಕು ವರ್ಷದವರಾಗಿದ್ದಾಗ, ತಮ್ಮ ತಂದೆಯೊಂದಿಗೆ ತಲಶ್ಯೇರಿಗೆ ತೆರಳಿದರು. ಪೀರ್ ಮುಹಮ್ಮದ್ ಅವರು ನಾಲ್ಕೈದು ತರಗತಿಗಳಲ್ಲಿ ಓದುತ್ತಿದ್ದಾಗ ಕವಿತೆಗಳನ್ನು ಹೇಳಲು ಪ್ರಾರಂಭಿಸಿದ್ದರು.
ಅವರ ಸಾಹಿತ್ಯಿಕ ಪ್ರಾವೀಣ್ಯ, ಸ್ಪಷ್ಟವಾದ ಧ್ವನಿ ಮತ್ತು ಹಾಡುವ ಸಮಯದಲ್ಲಿ ಸಾಂದರ್ಭಿಕ ಮುಖಭಾವಗಳು ಅವರನ್ನು ತಮ್ಮ ಸಹಪಾಠಿಗಳು ಮತ್ತು ಶಿಕ್ಷಕರೆಡೆಯಲ್ಲಿ ಶೀಘ್ರವಾಗಿ ಜನಪ್ರಿಯಗೊಳಿಸಿದವು.