janadhvani

Kannada Online News Paper

ವಿಷಾಹಾರವಾಗಿ ಪರಿಣಮಿಸಿದ ಚಿಕನ್ ರೋಲ್- ಎರಡೂವರೆ ವರ್ಷದ ಮಗು ಮೃತ್ಯು

ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹತ್ತು ಮಂದಿಗೆ ವಿಷಾಹಾರ ಸೇವನೆಗೆ ಚಿಕಿತ್ಸೆ ನೀಡಲಾಗಿದೆ ಎಂದು ವರದಿಯಾಗಿದೆ

ಕೋಝಿಕ್ಕೋಡ್ | ವಿಷಾಹಾರ ಸೇವಿಸಿ ಚಿಕಿತ್ಸೆ ಪಡೆಯುತ್ತಿದ್ದ ಎರಡೂವರೆ ವರ್ಷದ ಮಗು ಮೃತಪಟ್ಟಿದೆ. ಮೃತ ಮಗುವನ್ನು ಕೋಯಿಕ್ಕೋಡ್‌ನ ಅಕ್ಬರ್ ಎಂಬವರ ಪುತ್ರ ಮುಹಮ್ಮದ್ ಯಾಮಿನ್ ಎಂದು ಗುರುತಿಸಲಾಗಿದೆ. ಮದುವೆ ಮನೆಗೆ ತಂದಿದ್ದ ಚಿಕನ್ ರೋಲ್ ತಿಂದು ಅಸ್ವಸ್ಥಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹತ್ತು ಮಂದಿಗೆ ವಿಷಾಹಾರ ಸೇವನೆಗೆ ಚಿಕಿತ್ಸೆ ನೀಡಲಾಗಿದೆ ಎಂದು ವರದಿಯಾಗಿದೆ. ಗುರುವಾರ ನಡೆದ ಮದುವೆ ಸಮಾರಂಭದಲ್ಲಿ ಮಗು ಚಿಕನ್ ರೋಲ್ ತಿಂದಿದ್ದಾಗಿ ಸಂಬಂಧಿಕರು ಹೇಳಿದ್ದಾರೆ.

ಮಗುವನ್ನು ಕೊಡುವಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ನಂತರ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಸಂಜೆ ಮಗುವಿನ ಅಸು ನೀಗಿದೆ.