janadhvani

Kannada Online News Paper

ಇಹ್ಸಾನ್ ಪ್ಯೂಚರ್ ಅಕಾಡೆಮಿ ಸೆಂಟರ್- ನೂತನ ಕಟ್ಟಡ ನಾಳೆ ಉದ್ಘಾಟನೆ

ಕಾರಟಗಿ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಇಹ್ಸಾನ್ ಪ್ಯೂಚರ್ ಅಕಾಡೆಮಿ ಸೆಂಟರ್ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವು ನವೆಂಬರ್ 4 ಗುರುವಾರದಂದು ನೆರವೇರಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಈ ಕುರಿತು ಮಂಗಳವಾರದಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೌಲಾನಾ ಸಾಹುಲ್ ಹಮೀದ್ ಅವರು ಮಾತನಾಡಿ, ಬಹು ಸಯ್ಯಿದ್ ಅಬೂಬಕರ್ ಸಿದ್ದೀಕ್ ಮದನಿ ಅಲ್ ಹಾದಿ ತಂಙಳ್ , ತೀರ್ಥಹಳ್ಳಿ ನೇತೃತ್ವದಲ್ಲಿ ನಡೆಯಲಿರುವ ಈ ನೂತನ ಇಹ್ಸಾನ್ ಪ್ಯೂಚರ್ ಅಕಾಡೆಮಿ ಸೆಂಟರ್‌ನ ನೂತನ ಶಾಲಾ ಕಟ್ಟಡದ ಉದ್ಘಾಟನೆಯನ್ನು ಕನಕಗಿರಿಯ ಶಾಸಕರಾದ ಬಸವರಾಜ ವಡೇಸೂಗೂರು ನೆರವೇರಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಹ್ಸಾನ್ ಸಂಸ್ಥೆಯ ಅಧ್ಯಕ್ಷರಾದ ಎನ್.ಕೆ.ಎಮ್ ಶಾಫಿ ಸಅದಿ ಬೆಂಗಳೂರು (ಕರ್ನಾಟಕ ವಕ್ಫ್ ಬೋರ್ಡ್ ಸದಸ್ಯ ) ವಹಿಸಲಿದ್ದಾರೆ. ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಜ| ಡಾ. ಶೇಕ್ ಬಾವ ಕಾರ್ಯಕ್ರಮಕ್ಕೆ ಶುಭ ಹಾರೈಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಇಹ್ಸಾನ್ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಬಹು ಹಫೀಲ್ ಸಹದಿ ಸ್ವಾಗತವನ್ನು ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ನಾಗಪ್ಪ ಸಾಲೋಣಿ, ಶಿವರಾಜ ತಂಗಡಗಿ, ಇಕ್ಬಾ ಲ್ ಅನ್ಸಾರಿ ಹಾಗೂ ಮಾಜಿ ಶಾಸಕ ಹಸನ್ ಸಾಬ ದೋಟಿಹಾಳ ತಹಶೀಲ್ದಾರರಾದ ರವಿ.ಎಸ್ ಅಂಗಡಿ, ಮುಖ್ಯಾಧಿಕಾರಿ ರೆಡ್ಡಿ ರಾಯನಗಡ ಸೇರಿದಂತೆ ಕೆಸಿಎಫ್, ಎಸ್.ಎಸ್.ಎಫ್ ಅರೇಬಿಯಾ ರಾಷ್ಟ್ರೀಯ ಸಮಿತಿಯ ಪದಾಧಿಕಾರಿಗಳು, ಕರ್ನಾಟಕ ವಕ್ಫ್ ಮಂಡಳಿ ಸದಸ್ಯರು ಮತ್ತು SSF ರಾಜ್ಯ ನಾಯಕರು , KCF ಅಂತಾರಾಷ್ಟ್ರೀಯ ಸಮಿತಿ , ಸೌದಿ ರಾಷ್ಟೀಯ ಸಮಿತಿ ನಾಯಕರು , ಕರ್ನಾಟಕ ವಕ್ಫ್ ಮಂಡಳಿ ಸದಸ್ಯರು ಭಾಗವಹಿಸಲಿದ್ದಾರೆ.

ಈ ನಿಟ್ಟಿನಲ್ಲಿ ಸರ್ವರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು. ಈ ಸಂದರ್ಭದಲ್ಲಿ ಮೌಲಾನಾ ಖಾಜಿ ಗುಲಾಂ ಹುಸೇನ್ ನೂರಿ ಜಾಮಿಯಾ ಮಸೀದಿ ಬೂದಗುಂಪಾ, ಬಾಬುಸಾಬ ಬಳಿಗಾರ್, ಅಬ್ದುಲ್ ಗನಿಸಾಬ, ಖಾಜಾ ಹುಸೇನ್ ಮುಲ್ಲಾ, ಶಿರಾಜ್ ಹುಸೇನ್, ಗೌಸ್ ಮೊಯಿದ್ದೀನ್, ಅಮ್ರುಲ್ ಹುಸೇನ್, ಮಹಮ್ಮದ್ ಹನೀಫ್ ಮೇಸ್ತ್ರಿ, ಶಾಕೀರ್ ಹುಸೇನ್ ಇನ್ನಿತರರು ಉಪಸ್ಥಿತರಿದ್ದರು .