janadhvani

Kannada Online News Paper

‘ರಹ್ಮತೇ ರಬೀಅ್-21’:ನೇರೊಳ್ತಡ್ಕ ಮದ್ರಸಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ

ಪುತ್ತೂರು: ಮಿಲಾದುನ್ನಬಿ ಸ.ಅ.ಪ್ರಯುಕ್ತ ಅಲ್ ಮದ್ರಸತುಲ್ ಬದ್ರಿಯಾ ನೇರೊಳ್ತಡ್ಕ ಮದ್ರಸಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ರಹ್ಮತೇ ರಬೀಅ್ – 21′ ದಿನಾಂಕ 22.10.2021 ರಂದು ನೇರೊಳ್ತಡ್ಕ ಮಸೀದಿ ವಠಾರದಲ್ಲಿ ಜರಗಿತು.

ಸ್ಥಳೀಯ ಖತೀಬ್ ತ್ವಯ್ಯಿಬ್ ಸಖಾಫಿ ಯವರ ದುಆದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಅಬ್ದುರ್ರಝಾಕ್ ಸಖಾಫಿ ಸ್ವಾಗತಿಸಿದರು.ಅಬ್ದುಲ್ ಸತ್ತಾರ್ ಸಖಾಫಿ ಪ್ರಾಸ್ತಾವಿಕ ಮಾತನಾಡಿದರು. ನಂತರ ಮದ್ರಸ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಇಬ್ರಾಹಿಂ ಮುಸ್ಲಿಯಾರ್ ಓಲೆಮುಂಡವು ಅಬ್ದುರ್ರಹ್ಮಾನ್, ಶುಕೂರ್ ನೇರೊಳ್ತಡ್ಕ ಮುಂತಾದವರು ಉಪಸ್ಥರಿದ್ದರು.