ಹೊಸದಿಲ್ಲಿ : ರವಿವಾರ ಟಿ-20 ವಿಶ್ವ ಕಪ್ ಪಂದ್ಯಾವಳಿಯ ಭಾಗವಾಗಿ ಭಾರತ-ಪಾಕ್ ಪಂದ್ಯದಲ್ಲಿ ಭಾರತೀಯ ಬೌಲರ್ ಮುಹಮ್ಮದ್ ಶಮಿ ಹೇಳಿಕೊಳ್ಳುವಂತಹ ನಿರ್ವಹಣೆ ತೋರದೇ ಇರುವುದನ್ನು ಟೀಕಿಸಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದ್ವೇಷಪೂರಿತ ಪೋಸ್ಟ್ ಗಳನ್ನು ಖಂಡಿಸಿ ಹಾಗೂ ಶಮಿ ಅವರಿಗೆ ಬೆಂಬಲ ಸೂಚಿಸಿ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಟ್ವಿಟ್ ಮಾಡಿದ್ದಾರಲ್ಲದೆ ಈ ದ್ವೇಷಪೂರಿತ ಪೋಸ್ಟ್ ಗಳು ಆಘಾತಕಾರಿ, ನಾವು ಶಮಿ ಅವರ ಜತೆಗೆ ನಿಲ್ಲುತ್ತೇವೆ ಎಂದಿದ್ದಾರೆ.
“ಆನ್‌ಲೈನ್ ಗುಂಪಿಗಿಂತಲೂ ಹೆಚ್ಚಾಗಿ ಭಾರತದ ಕ್ಯಾಪ್ ಧರಿಸುವ ಯಾರದ್ದೇ ಹೃದಯದಲ್ಲಾದರೂ ಭಾರತವು ತುಂಬಿರುತ್ತದೆ,” ಎಂದು ಸೆಹ್ವಾಗ್ ಟ್ವಿಟ್ ಮಾಡಿದ್ದಾರೆ.
“ಶಮಿ ಅವರ ವಿರುದ್ಧದ ಆನ್‌ಲೈನ್ ದಾಳಿ ಆಘಾತಕಾರಿ, ನಾವು ಅವರ ಜತೆಗಿದ್ದೇವೆ. ಅವರೊಬ್ಬ ಚಾಂಪಿಯನ್, ನಿಮ್ಮ ಜತೆಗಿದ್ದೇವೆ ಶಮಿ, ‘ಅಗ್ಲೆ ಮ್ಯಾಚ್ ಮೆ ದಿಖಾದೋ ಜಲ್ವಾ’,” ಎಂದು ಸೆಹ್ವಾಗ್ ಟ್ವಿಟ್ ಮಾಡಿದ್ದಾರೆ.
The online attack on Mohammad Shami is shocking and we stand by him. He is a champion and Anyone who wears the India cap has India in their hearts far more than any online mob. With you Shami. Agle match mein dikado jalwa.
— Virender Sehwag (@virendersehwag) October 25, 2021