ವಾಷಿಂಗ್ಟನ್, ಅ.23: ಅಮೆರಿಕಾದಲ್ಲಿ ಸ್ಟಿಕ್ಕರ್ ಅಥವಾ ಪ್ಯಾಕೇಜಿಂಗ್ ಹೊಂದಿರದ ಯಾವುದೇ ಸಂಪೂರ್ಣ ಕೆಂಪು, ಬಿಳಿ ಮತ್ತು ಹಳದಿ ಈರುಳ್ಳಿಯನ್ನು ಬಳಕೆ ಮಾಡದಂತೆ ನಿರ್ಬಂಧ ವಿಧಿಸಲಾಗಿದೆ.
ಅಮೆರಿಕಾದ 37 ರಾಜ್ಯಗಳಲ್ಲಿ 650ಕ್ಕೂ ಹೆಚ್ಚು ಜನರು ಸಾಲ್ಮೊನೆಲ್ಲಾ ಎಂಬ ಕಾಯಿಲೆಯಿಂದ ಅನಾರೋಗ್ಯಕ್ಕೆ ಒಳಗಾಗಿದ್ದು, 75% ಜನರು ಅನಾರೋಗ್ಯಕ್ಕೆ ಒಳಗಾಗುವ ಮೊದಲು ಈರುಳ್ಳಿ ಬಳಸಿದ ಖಾದ್ಯ ಅಥವಾ ಹಸಿ ಈರುಳ್ಳಿಯನ್ನು ಹೊಂದಿರುವ ಭಕ್ಷ್ಯಗಳನ್ನು ಆಹಾರದ ಜೊತೆಗೆ ಸೇವಿಸಿದ್ದಾರೆ ಎಂದು ಯುಎಸ್ ಅಧಿಕಾರಿಗಳು ಕಂಡುಕೊಂಡಿದ್ದಾರೆ.
ಮೆಕ್ಸಿಕೋದ ಚಿಹುವಾದಿಂದ ಆಮದು ಮಾಡಿಕೊಂಡ ಈರುಳ್ಳಿಯಲ್ಲಿ ಈ ವೈರಸ್ ಪತ್ತೆಯಾಗಿದೆ. ಸೋಂಕಿನಿಂದ ಯಾವುದೇ ಸಾವು ನೋವುಸಂಭವಿಸಿಲ್ಲ ಎಂದು ಸಿ.ಡಿ.ಸಿ. ಹೇಳಿದೆ. ಹೆಚ್ಚಿನ ಪ್ರಕರಣಗಳು ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಮತ್ತು ಹೆಚ್ಚಾಗಿ ಟೆಕ್ಸಾಸ್ ಮತ್ತು ಒಕ್ಲಹೋಮದಿಂದ ವರದಿಯಾಗಿವೆ.
ಏನಿದು ಸಾಲ್ಮೊನೆಲ್ಲಾ ಸೋಂಕು?
ಸಾಲ್ಮೊನೆಲ್ಲಾ ಎಂದರೇ ಒಂದು ಬ್ಯಾಕ್ಟೀರಿಯಾ, ಇದರ ಸೋಂಕು ಮನುಷ್ಯನ ದೇಹ ಹೊಕ್ಕರೆ ಹೊಟ್ಟೆಯಲ್ಲಿ ಅನಾರೋಗ್ಯ ಉಂಟಾಗುತ್ತದೆ. ಕೆಲವರಿಗೆ ಟೈಫಾಯ್ಡ್ನಂತಹ ರೋಗಗಳು ಕಾಣಿಸಿಕೊಳ್ಳಬಹುದು. ಇನ್ನೂ ಕೆಲವರಿಗೆ ಭೇದಿ, ಜ್ವರ ಹಾಗೂ ಹೊಟ್ಟೆನೋವಿನ ಇನ್ನಿತರ ಲಕ್ಷಣಳು ಕಾಣಿಸಿಕೊಳ್ಳುತ್ತೆ. ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಇರುವ ಆಹಾರ ಸೇವಿದ 6 ಗಂಟೆಗಳಿಂದ 6 ದಿನದೊಳಗೆ ಅನಾರೋಗ್ಯ ಉಂಟಾಗುತ್ತದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದಿದದರೇ ಮೂತ್ರ, ರಕ್ತ, ಮೂಳೆ, ಕೀಲು ನರ, ಮೆದುಳಿಗೂ ಈ ಸೋಂಕು ಹರಡುತ್ತೆ. ಈ ಬಗ್ಗೆ ನಾವು ನಿಗಾ ವಹಿಸದಿದ್ದರೇ ಸೋಂಕು ಹರುಡುವ ಸಾಧ್ಯರೆ ಕೂಡ ಹೆಚ್ಚಿರುತ್ತೆ. ಹೀಗಾಗಿ ಎಚ್ಚರದಿಂದ ಇರುವಂತೆ ಸೂಚನೆ ನೀಡಲಾಗಿದೆ.
ಈರುಳ್ಳಿಯನ್ನು ತಿಂಗಳುಗಟ್ಟಲೆ ಇಡುವುದರಿಂದ ಜನರ ಬಳಿ ಈಗಲೂ ಸೋಂಕಿತ ಈರುಳ್ಳಿ ಇರಬಹುದು. ಹೀಗಾಗಿ ಕೆಂಪು, ಹಳದಿ ಮತ್ತು ಬಿಳಿ ಈರುಳ್ಳಿಗಳು ಮನೆಯಲ್ಲಿದ್ದರೆ ಎಸೆದುಬಿಡಿ ಎಂದು ಆರೋಗ್ಯ ಅಧಿಕಾರಿಗಳು ಸೂಚಿಸಿದ್ದಾರೆ. ಇನ್ನೂ ಈ ರೀತಿಯ ಸೂಚನೆ ನೀಡುತ್ತಿದ್ದಂತೆ ಅಲ್ಲಿನ ಜನರು ಭಯಗೊಂಡು ಮನೆಯಲ್ಲಿರುವ ಈರುಳ್ಳಿಯನ್ನು ಎಸೆಯುತ್ತಿದ್ದಾರೆ.