ರಿಯಾದ್: ಸೌದಿ ಅರೇಬಿಯಾ ಕೋವಿಡ್ ವ್ಯಾಕ್ಸ್ ನ ಬೂಸ್ಟರ್ ಡೋಸ್ ನೀಡುವ ಪ್ರಕ್ರಿಯೆಯನ್ನು ಆರಂಭಿಸಿದೆ.
ಲಸಿಕೆ ಹಾಕಿಸಿಕೊಂಡು ಆರು ತಿಂಗಳು ಪೂರ್ಣಗೊಂಡ, 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತದೆ. ಲಸಿಕೆಯ ಬುಕಿಂಗ್ ಅನ್ನು ಆರೋಗ್ಯ ಸಚಿವಾಲಯದ ಮೊಬೈಲ್ ಅಪ್ಲಿಕೇಶನ್ ‘ಸ್ವಿಹ್ಹತಿ, ತವಕ್ಕಲ್ನಾ’ ಮೂಲಕ ಮಾಡಬೇಕು.
ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರು ಆದಷ್ಟು ಬೇಗ ಬೂಸ್ಟರ್ ಡೋಸ್ ತೆಗೆದುಕೊಳ್ಳಲು ಸಿದ್ಧರಾಗಿರಬೇಕು ಎಂದು ಆರೋಗ್ಯ ಸಚಿವಾಲಯವು ಒತ್ತಾಯಿಸಿದೆ.







