ರಿಯಾದ್ : (ಜನಧ್ವನಿ ವಾರ್ತೆ) ಸಮಾಜದ ಬಡ ಹಾಗೂ ನಿರ್ಗತಿಕ ಮಕ್ಕಳನ್ನು ಗುರುತಿಸಿ ಅವರಿಗೆ ಒಂದೇ ಸೂರಿನಡಿಯಲ್ಲಿ ಉಭಯ ಶಿಕ್ಷಣ ಒದಗಿಸುವ ದೃಷ್ಟಿಯಿಂದ ಬಂಟ್ವಾಳ ತಾಲೂಕಿನ ಮಾಣಿಯಲ್ಲಿ ಕಳೆದ ಸುಮಾರು ವರ್ಷಗಳ ಹಿಂದೆ ಆರಂಭಿಸಿದ ಜಿಲ್ಲೆಯ ಮೊದಲ ಶೈಕ್ಷಣಿಕ ಕೇಂದ್ರ ‘ಮಾಣಿ ದಾರುಲ್ ಇರ್ಶಾದ್ ಎಜುಕೇಶನ್ ಸೆಂಟರ್’ ಇದರ ರಿಯಾದ್ ಘಟಕದ ಮಹಾಸಭೆಯು ಇತ್ತೀಚೆಗೆ ಇಲ್ಲಿನ ‘ ಕ್ಲಾಸಿಕ್ ಸಭಾಂಗಣ’ ದಲ್ಲಿ ನಡೆಯಿತು.
‘ದಾರುಲ್ ಇರ್ಶಾದ್’ ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಜ: ಅನ್ವರ್ ಗೂಡಿನಬಳಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಸ್ಥೆಯ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಶಾಹುಲ್ ಹಮೀದ್ ಉಜಿರೆ ಅನಿವಾಸಿ ಕನ್ನಡಿಗರು ಕಳೆದ ಹತ್ತಾರು ವರ್ಷಗಳಿಂದ ಸಂಸ್ಥೆಗೆ ನೀಡುತ್ತಿರುವ ಆರ್ಥಿಕ ಬೆಂಬಲ ಹಾಗೂ ಆ ಮೂಲಕ ಸಂಸ್ಥೆ ಬೆಳೆದು ಬಂದ ಹಾದಿಯನ್ನು ಸಾರ್ವಜನಿಕರಿಗೆ ವಿವರಿಸಿದರು. ರಿಯಾದ್ ಸಮಿತಿ ಕಾರ್ಯದರ್ಶಿ ಸಲೀಂ ಕನ್ಯಾಡಿ ಗತ ವರ್ಷದ ಲೆಕ್ಕ ಪತ್ರ ಹಾಗೂ ವರದಿ ಮಂಡಿಸಿದರು. ರಿಯಾದ್ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಜೋಗಿಬೆಟ್ಟು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಹಾಲಿ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿಗೆ ಚಾಲನೆ ನೀಡಲಾಯಿತು. “ದಾರುಲ್ ಇರ್ಶಾದ್” ಸೌದಿ ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷ ಖಮರುದ್ದೀನ್ ಗೂಡಿನಬಳಿ ಚುನಾವಣಾ ವೀಕ್ಷಕರಾಗಿ ಆಗಮಿಸಿದ್ದರು. ಸಂಸ್ಥೆಯ ಅಭಿವೃದ್ಧಿಗಾಗಿ ರಾತ್ರಿ ಹಗಲೆನ್ನದೆ ಒಡಾಡುತ್ತಿರುವ ರಿಯಾದ್ ಸಮಿತಿ ಸಂಚಾಲಕ ರಶೀದ್ ಮದನಿ ರಂತಡ್ಕ ಇವರನ್ನು ಈ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಹಾಗೂ ಶಾಲು ಹೊದಿಸಿ ಸನ್ಮಾನಿಸಲಾಯಿತು.
ನೂತನ ಸಾಲಿಗೆ ಅಧ್ಯಕ್ಷರಾಗಿ ಇಸ್ಮಾಯಿಲ್ ಜೋಗಿಬೆಟ್ಟು , ಉಪಾಧ್ಯಕ್ಷರಾಗಿ ಅಬೂಬಕ್ಕರ್ ಸಾಲೆತ್ತೂರು ಹಾಗೂ ಹಂಝ ಮೈಂದಾಳ , ಕಾರ್ಯದರ್ಶಿಯಾಗಿ ಸಲೀಂ ಕನ್ಯಾಡಿ, ಜೊತೆ ಕಾರ್ಯದರ್ಶಿಗಳಾಗಿ ಶಮೀರ್ ಜೆಪ್ಪು ಹಾಗೂ ರಮೀಝ್ ಕುಳಾಯಿ, ಕೋಶಾಧಿಕಾರಿಯಾಗಿ ಉಮರ್ ಅಳಕೆಮಜಲು ಇವರನ್ನು ಆಯ್ಕೆ ಮಾಡಲಾಯಿತು. ಸಲಹಾ ಸಮಿತಿ ಸದಸ್ಯರಾಗಿ ಅಬ್ದುಲ್ ರಹ್ಮಾನ್ ಮದನಿ ಮಂಜನಾಡಿ, ಹನೀಫ್ ಬೆಳ್ಳಾರೆ, ನಝೀರ್ ಕಾಶಿಪಟ್ಣ ಹಾಗೂ ಅಝೀಝ್ ಬಜ್ಪೆ ಆಯ್ಕೆಯಾದರು.
ಅಧ್ಯಕ್ಷ ಇಸ್ಮಾಯಿಲ್ ಜೋಗಿಬೆಟ್ಟು
ಕೆಸಿಎಫ್ ರಿಯಾದ್ ಸಮಿತಿ ಅಧ್ಯಕ್ಷ ಹನೀಫ್ ಬೆಳ್ಳಾರೆ, ದಾರುಲ್ ಇರ್ಶಾದ್ ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷ ಆಸಿಫ್ ಗೂಡಿನಬಳಿ, ದಮ್ಮಾಂ ಘಟಕದ ಅಧ್ಯಕ್ಷ ಇಕ್ಬಾಲ್ ಅರ್ಕುಳ , ಕಾರ್ಯದರ್ಶಿ ಬಶೀರ್ ಇಂದ್ರಾಜೆ, ದಮ್ಮಾಂ ಮಾಜಿ ಅಧ್ಯಕ್ಷ ಅಬ್ದುಲ್ ರಹಮಾನ್ ಅರ್ಕುಳ , ಮುಖಂಡ ನೌಶಾದ್ ಪೋಳ್ಯ ಉದ್ಯಮಿ ಅಬೂಬಕ್ಕರ್ ಸಾಲೆತ್ತೂರು, ರಿಯಾದ್ ಸಮಿತಿ ಕೋಶಾಧಿಕಾರಿ ಉಮರ್ ಅಳಕೆಮಜಲು, ಕೆಸಿಎಫ್ ಮುಂದಾಳು ಅಬ್ದುರ್ರಹ್ಮಾನ್ ಮದನಿ ಮುಂತಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ಸಲೀಂ ಕನ್ಯಾಡಿ
ಆರಂಭದಲ್ಲಿ “ಅಜ್ಮೀರ್ ಮೌಲಿದ್” ಹಾಗೂ ಆ ಕುರಿತಂತೆ ಸಂದೇಶ ಭಾಷಣ ನಡೆಯಿತು. ಸಿದ್ದೀಕ್ ಸಖಾಫಿ ಪೆರುವಾಯಿ ಸಂದೇಶ ಭಾಷಣ ನಡೆಸಿಕೊಟ್ಟರು.
ಕೋಶಾಧಿಕಾರಿ ಉಮರ್ ಅಳಕೆಮಜಲು
ಅಬ್ದುಲ್ಲ ಸಖಾಫಿ ನಿಂತಿಕಲ್ಲು ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕ ರಶೀದ್ ಮದನಿ ಆರಂಭದಲ್ಲಿ ಸ್ವಾಗತಿಸಿ ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು.