janadhvani

Kannada Online News Paper

ನೌಕರರ ಅವಶ್ಯಕತೆಯಿಲ್ಲ ,ದುಬೈ ತ್ಯಾಜ್ಯ ಸಂಗ್ರಹಣೆ ಕೂಡ ಸ್ಮಾರ್ಟ್

ದುಬೈ: ವಿವಿಧ ವಲಯಗಳಲ್ಲಿ ಸ್ಮಾರ್ಟ್ ಆದ ದುಬೈನಲ್ಲಿ ಇನ್ನು ಮುಂದೆ ತ್ಯಾಜ್ಯ ಸಂಗ್ರಹಣೆ ಕೂಡ ಅದೇ ಮಾದರಿಯಲ್ಲಿ ಸಾಗಲಿದೆ. ದುಬೈ ಮುನಿಸಿಪಾಲಿಟಿಯ ತ್ಯಾಜ್ಯ ನಿರ್ವಹಣಾ ವಿಭಾಗದ ಮೊದಲ ಸ್ಮಾರ್ಟ್ ತ್ಯಾಜ್ಯ ಸಂಗ್ರಹ ಯೋಜನೆಯನ್ನು ಮಂಝರ್ ವಲಯದಲ್ಲಿ ಆರಂಭಿಸಲಾಗಿದೆ.

ಹೊಸ ವಿಧಾನ ದಲ್ಲಿ ಉದ್ಯೋಗಿಗಳ ಆವಶ್ಯಕತೆ ಇಲ್ಲ ಎನ್ನುವುದು ವಿಷೇಶತೆಯಾಗಿದೆ. ವಾಹನವನ್ನು ಚಾಲಕ ನಿಭಾಯಿಸುತ್ತಾನೆ. ಆದರೂ, ಒಂದು ತಂಡವು ಅದಕ್ಕೆ ವಾಹನದಲ್ಲಿ ಕೆಲಸ ಮಾಡಲಿದೆ.ಪ್ರತ್ಯೇಕ ವಾಹನದಲ್ಲಿ ವ್ಯವಸ್ಥೆಗೊಳಿಸಲಾದ ವಿಧಾನದ ಮೂಲಕ ತ್ಯಾಜ್ಯಗಳನ್ನು ಸಂಗ್ರಹಿಸಲಾಗುತ್ತದೆ. ಪರಿಸರ ಮಲಿನವಾಗದ ರೀತಿಯಲ್ಲಿ ಕೊಂಡೊಯ್ಯುತ್ತದೆ. ಸಾಮಾನ್ಯ ತ್ಯಾಜ್ಯ ಮತ್ತು ಮರು ಉಪಯೋಗದ ಮಾಲಿನ್ಯಗಳನ್ನು ಬೇರ್ಪಡಿಸಲು ಎರಡು ಕಂಟೈನರ್ಗಳನ್ನು ಈ ವಾಹನದಲ್ಲಿ ಸ್ಥಾಪಿಸಲಾಗಿದೆ. ಇದಲ್ಲದೆ, ಬಹಳಷ್ಟು ಮುಂದುವರಿದ ವಿಧಾನಗಳನ್ನೂ ಅಳವಡಿಸಲಾಗಿದೆ.

ಗಾರ್ಬೇಜ್ ಸಂಗ್ರಹದಲ್ಲಿ ನವೀನವಾದ ವಿಧಾನಗಳನ್ನು ಅಳವಡಿಸಲಾಗಿದೆ ಎಂದು ತ್ಯಾಜ್ಯ ನಿರ್ವಹಣಾ ವಿಭಾಗದ ನಿರ್ದೇಶಕ ಮಜೀದ್ ಸೈಫಿ ಹೇಳಿದ್ದಾರೆ.

ಶೀಘ್ರದಲ್ಲೇ ಇತರ ಸ್ಥಳಗಳಿಗೆ ಈ ವಿಧಾನವನ್ನು ವಿಸ್ತರಿಸಲಾಗುವುದು. ಮಂಝರ್ ಪ್ರದೇಶದ ಒಟ್ಟು 133 ಜನವಾಸ ಕೇಂದ್ರಗಳಿಗೆ ಭೇಟಿ ನೀಡಿದ ವಕ್ತಾರರು ಈ ಹೊಸ ಕಾರ್ಯ ಚಟುವಟಿಕೆ ಸಂಬಂಧಿಸಿದ ಅರಿವು ಮೂಡಿಸಿದೆ ಮತ್ತು ಅವರ ಸಹಕಾರವನ್ನು ಯಾಚಿಸಿವೆ..

ದುಬೈ ಪುರಸಭೆಯ ತ್ಯಾಜ್ಯ ನಿರ್ವಹಣಾ ವಿಭಾಗದಲ್ಲಿ ಸಾವಿರಾರು ಭಾರತೀಯರು ಕೆಲಸ ಮಾಡುತ್ತಿದ್ದಾರೆ.

error: Content is protected !! Not allowed copy content from janadhvani.com