ಅಕ್ಟೋಬರ್ 15 ರಂದು ಕೆ.ಸಿ.ಎಫ್ ಅಬುಧಾಬಿ ವತಿಯಿಂದ ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಾಫ (ಸ.ಅ) ಜನ್ಮದಿನಾಚರಣೆಯ ಪ್ರಯುಕ್ತ ನಡೆಯುವ ಗ್ರಾಂಡ್ ಮೀಲಾದ್ ಸ್ವಾಗತ ಸಮಿತಿಯ ರಚನೆ ಸಭೆಯು ತಾರೀಕು 10-9-2021 ರಂದು ಕೆ.ಸಿ.ಎಫ್ ಅಬುಧಾಬಿ ಝೋನ್ ಅಧ್ಯಕ್ಷರಾದ ಬಹು!ಹಸೈನಾರ್ ಅಮಾನಿ ಅಜ್ಜಾವರ ಇವರ ಅದ್ಯಕ್ಷತೆಯಲ್ಲಿ ಅಬುಧಾಬಿ ಕೆ.ಸಿ.ಎಫ್ ಸೆಂಟರಿನಲ್ಲಿ ನಡೆಯಿತು.
ಸಭೆಯಲ್ಲಿ ಕೆ.ಸಿ.ಎಫ್ ಅಬುಧಾಬಿ ಗ್ರಾಂಡ್ ಮೀಲಾದ್ ಸಮಿತಿ ಚೈರ್ಮಾನ್ ಹಾಜಿ!ಮುಹಮ್ಮದ್ ಅಲಿ ಬ್ರೈಟ್ ಮಾರ್ಬಲ್,ಜನರಲ್ ಕನ್ವಿನರಾಗಿ ಮುಹಮ್ಮದ್ ಹಕೀಮ್ ತುರ್ಕಳಿಕೆ,ಹಣಕಾಸು ಕಾರ್ಯದರ್ಶಿಯಾಗಿ ಎಂಜಿನಿಯರ್ ಮನ್ಸೂರ್ ಚಿಕ್ಕಮಂಗಳೂರು,
ಹಾಗೂ ಕೆ.ಸಿ.ಎಫ್ ಅಬುಧಾಬಿ ಝೋನ್ ಅಧೀನದಲ್ಲಿರುವ ಏಳು ಸೆಕ್ಟರಿನ ನೂರ ಒಂದು ಸದಸ್ಯರನ್ನು ಒಳಗೊಂಡ ತಂಡವನ್ನು ಸ್ವಾಗತ ಸಮಿತಿ ಸಭೆಯಲ್ಲಿ ಆಯ್ಕೆಮಾಡಲಾಯಿತು.