janadhvani

Kannada Online News Paper

ಕೋವಿಡ್ ಮುಂಚಿನ ರೂಪದಲ್ಲೇ ಉಮ್ರಾ ಯಾತ್ರೆಗೆ ಅವಕಾಶ

ಮಕ್ಕತುಲ್ ಮುಕರ್ರಮಃ : ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯವು ಹೊಸ ಸೀಸನ್ ಗೆ ವಿದೇಶದಿಂದ ಹೆಚ್ಚಿನ ಉಮ್ರಾ ಯಾತ್ರಾರ್ಥಿಗಳನ್ನು ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಘೋಷಿಸಿದೆ.

ಕೋವಿಡ್‌ಗಿಂತ ಮುಂಚಿತವಾಗಿ ವಿವಿಧ ದೇಶಗಳೊಂದಿಗೆ ಒಪ್ಪಂದ ಮಾಡಲಾಗಿರುವ ಉಮ್ರಾ ಕೋಟಾದ ಅಡಿಯಲ್ಲಿ ಯಾತ್ರಾರ್ಥಿಗಳಿಗೆ ಪರವಾನಗಿ ನೀಡಲು ಸಚಿವಾಲಯ ಸಿದ್ಧತೆ ನಡೆಸಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಕೋವಿಡ್ ನಂತರ ಸೌದಿ ಅರೇಬಿಯಾ ಸಹಜ ಸ್ಥಿತಿಗೆ ಮರಳುತ್ತಿರುವ ಹಿನ್ನೆಲೆಯಲ್ಲಿ ಹಜ್ ಮತ್ತು ಉಮ್ರಾ ಸಚಿವಾಲಯವು ಈ ನಿರ್ಧಾರ ಕೈಗೊಂಡಿದೆ. ಹೊಸ ಋತುವಿನಲ್ಲಿ ವಿದೇಶಿ ಉಮ್ರಾ ಯಾತ್ರಾರ್ಥಿಗಳನ್ನು ಸ್ವೀಕರಿಸಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದು ಹಜ್ ಮತ್ತು ಉಮ್ರಾ ಉಪ ಸಚಿವರು ಅಮರ್ ಅಲ್-ಮದ್ದಾ ತಿಳಿಸಿದ್ದಾರೆ.

ದೇಶೀಯ ಮತ್ತು ವಿದೇಶಿ ಯಾತ್ರಿಕರ ಮಾಹಿತಿಯನ್ನು ಕ್ರೋಡೀಕರಿಸಲು ಮತ್ತು ಸುಗಮವಾದ ಉಮ್ರಾವನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯದ ಅಡಿಯಲ್ಲಿ ಮೊಬೈಲ್ ಅಪ್ಲಿಕೇಶನ್‌ಗಳನ್ನು ಲಿಂಕ್ ಮಾಡಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವಾಲಯ ಹೇಳಿದೆ.

ಈ ಯೋಜನೆಯನ್ನು ಇಅ್ತಮರ್ನಾ ಮತ್ತು ಶೀರ್ ಆಪ್‌ಗಳನ್ನು ಸಂಪರ್ಕಿಸುವ ಮೂಲಕ ಕಾರ್ಯಗತಗೊಳಿಸಲಾಗುತ್ತಿದೆ. ವಿದೇಶದಿಂದ ಆಗಮಿಸುವ ಯಾತ್ರಾರ್ಥಿಗಳಿಗೆ ಸ್ಮಾರ್ಟ್ ಕಾರ್ಡ್ ನೀಡುವ ಮೂಲಕ ಯಾತ್ರೆ ಪುನರಾರಂಭಗೊಳ್ಳಲಿದೆ. ಪೈಲಟ್ ಯೋಜನೆಯು ಕಳೆದ ಹಜ್ ಋತುವಿನಲ್ಲಿ ಉತ್ತಮ ಯಶಸ್ಸನ್ನು ಕಂಡಿತು.

error: Content is protected !! Not allowed copy content from janadhvani.com