ಅಬುಧಾಬಿ: ಯುಎಇಯಲ್ಲಿ ಕೋವಿಡ್ ನಿಯಮ ಉಲ್ಲಂಘನೆಗಳ ದಂಡವನ್ನು ಪರಿಷ್ಕರಿಸಲಾಗಿದೆ.ಅನುಮತಿಸಲಾದ ಮಿತಿಗಳನ್ನು ಮೀರಿ ವಾಹನಗಳಲ್ಲಿ ಪ್ರಯಾಣಿಸುವುದು ಸೇರಿದಂತೆ ಉಲ್ಲಂಘನೆಗಳ ದಂಡವನ್ನು ಅಧಿಕಾರಿಗಳು ಹೊರಡಿಸಿದ ಹೊಸ ನೋಟಿಸ್ ನಲ್ಲಿ ಸ್ಪಷ್ಟಪಡಿಸಲಾಗಿದೆ.
ಅನುಮತಿಸಿದ ಮಿತಿಗಿಂತ ಹೆಚ್ಚಿನ ಮಂದಿ, ಕಾರುಗಳು, ಪಿಕ್ ಅಪ್ ಟ್ರಕ್‌ಗಳು, ಬೈಕ್‌ಗಳು ಮತ್ತು ಇತರ ವಾಹನಗಳಲ್ಲಿ ಪ್ರಯಾಣಿಸಿದ್ದಲ್ಲಿ 3,000 ದಿರ್ಹಮ್‌ಗಳವರೆಗೆ ದಂಡ ವಿಧಿಸಲಾಗುವುದು ಎಂದು ಅಟಾರ್ನಿ ಜನರಲ್ ಹೇಳಿದ್ದಾರೆ.
ದ್ವಿಚಕ್ರವಾಹನದಲ್ಲಿ ಸವಾರರಿಗೆ ಮಾತ್ರ ಅವಕಾಶವಿದೆ. ಪಿಕಪ್ ಟ್ರಕ್‌ಗಳಲ್ಲಿ, ಚಾಲಕರೊಂದಿಗೆ ಓರ್ವ ಪ್ರಯಾಣಿಕನಿಗೆ ಅನುಮತಿಯಿದೆ. ಇತರ ವಾಹನಗಳಲ್ಲಿ, ಚಾಲಕ ಮತ್ತು ಇಬ್ಬರು ಪ್ರಯಾಣಿಕರನ್ನು ಅನುಮತಿಸಲಾಗಿದೆ.
ಒಂದು ಕುಟುಂಬದ ಸದಸ್ಯರು, ಅವರ ಮನೆಕೆಲಸಗಾರರು ಮತ್ತು ಹತ್ತಿರದ ಸಂಬಂಧಿಗಳಿಗೆ ವಿನಾಯಿತಿಯಿದೆ. ವಾಹನದಲ್ಲಿ ಡ್ರೈವರ್ ಒಬ್ಬರೇ ಇದ್ದಲ್ಲಿ ಮಾಸ್ಕ್ ಧರಿಸುವ ಅಗತ್ಯವಿಲ್ಲ.ಅದೇ ರೀತಿ, ಕುಟುಂಬದ ಸದಸ್ಯರು ಮತ್ತು ಅವರ ಸೇವಕರು ಮಾತ್ರ ವಾಹನದಲ್ಲಿದ್ದರೆ ವಾಹನದ ಒಳಗಡೆ ಮಾಸ್ಕ್ ಧರಿಸಬೇಕಿಲ್ಲ.