ಗುರುಪುರ ಕೈಕಂಬ: – ಮದ್ರಸ ಶಿಕ್ಷಣಾಭಿವೃದ್ದಿ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಚರಿಸುತ್ತಿರುವ ಸುನ್ನೀ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಕೈಕಂಬ ರೀಜನಲ್ ಇದರ ಮಹಾ ಸಭೆಯು ಮರ್ಕಝ್ ಕೈಕಂಬದಲ್ಲಿ ನಡೆಯಿತು.
SMA ನಿಕಟಪೂರ್ವ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಬಂಗ್ಲೆಗುಡ್ಡೆ ಸೈಟ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ M.PM ಅಶ್ರಫ್ ಸಅದಿ ಮಲ್ಲೂರು ,ಬದ್ರುದ್ದೀನ್ ಅಝ್ಹರಿ ಕೈಕಂಬ,ಮುಬಾರಕ್ ಸಖಾಫಿ ವಾಮಂಜೂರು , ಸೆಮಿನಾರ್ ಮಂಡಿಸಿದರು. ಎಲೆಕ್ಷನ್ ಬೋರ್ಡ್ ಚೇರ್ಮ್ಯಾನ್ ಅಬ್ದುಲ್ ಕಾದರ್ ಮೂಡುಕೆರೆ ರವರ ನೇತೃತ್ವದಲ್ಲಿ ನೂತನ ಸಮಿತಿ ಅಸ್ತಿತ್ವಕ್ಕೆ ತರಲಾಯಿತು.
ಅಧ್ಯಕ್ಷರಾಗಿ ಇಸ್ಮಾಯಿಲ್ ಬಶೀರ್ ಮರ್ಕಝ್ ನಗರ.
ಪ್ರಧಾನ ಕಾರ್ಯದರ್ಶಿಯಾಗಿ ಕೆ. ಹೆಚ್ ಯು ಶಾಫಿ ಮದನಿ ಕುಪ್ಪೆಪದವು ,ಕೋಶಾಧಿಕಾರಿ ಯಾಗಿ ಇಬ್ರಾಹಿಂ ಮೂಡುಶೆಡ್ಡೆ ,ಇವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು.
ಸದ್ರಿ ಸಮಿತಿಯ ಉಪಾಧ್ಯಕ್ಷರಾಗಿ ಖಲೀಲುರ್ರಹ್ಮಾನ್ ಅಬ್ಬೆಟ್ಟು ,ಮುಸ್ತಫಾ ವಾಮಂಜೂರು ,ಹಂಝ ಮೊಗರು ಹಾಗೂ ಕಾರ್ಯದರ್ಶಿಗಳಾಗಿ ರಝ್ಝಾಕ್ ಹಾಜಿ ಮರ್ಕಝ್ ನಗರ ಕೋಯ ಉಸ್ತಾದ್ ಕೈಕಂಬ ,ಕಾಸಿಂ ಸಅದಿ ಮೂಡುಕೆರೆ ಹಾಗೂ ಸದ್ರಿ ಸಮಿತಿಗೆ 23 ಕಾರ್ಯಕಾರಿಣಿ ಸದಸ್ಯರನ್ನು ನೇಮಕಗೊಳಿಸಲಾಯಿತು.