ರಿಯಾದ್: ಸೌದಿ ಅರೇಬಿಯಾದಲ್ಲಿ ಕಾನೂನು ಉಲ್ಲಂಘಕರ ಪರವಾಗಿ ವಿದೇಶಕ್ಕೆ ಹಣ ಕಳುಹಿಸಿದ ನಾಲ್ವರು ವಲಸಿಗರನ್ನು ಬಂಧಿಸಲಾಗಿದೆ.
ಇದನ್ನು ರಿಯಾದ್ ಪೊಲೀಸ್ ವಕ್ತಾರ ಮೇಜರ್ ಖಾಲಿದ್ ಅಲ್-ಕುರೈದಿಸ್ ತಿಳಿಸಿದ್ದಾರೆ. ಬಂಧಿತರು, ಕಾನೂನು ಉಲ್ಲಂಘಕರಿಂದ 350,000 ದಿರ್ಹಮ್ ಸಂಗ್ರಹಿಸಿ ವಿದೇಶಕ್ಕೆ ಕಳುಹಿಸಿರುವುದು ಕಂಡುಬಂದಿದೆ.
ದೇಶದ ಇಖಾಮ, ಕಾರ್ಮಿಕ, ಗಡಿ ಮತ್ತು ಭದ್ರತಾ ಕಾನೂನುಗಳನ್ನು ಉಲ್ಲಂಘಿಸಿ ಸೌದಿ ಅರೇಬಿಯಾದಲ್ಲಿ ವಾಸಿಸುತ್ತಿರುವ ವಲಸಿಗರ ಪರವಾಗಿ ಹಣವನ್ನು ಕಳುಹಿಸಲಾಗಿದೆ.ಇವುಗಳನ್ನು ಕಾನೂನು ಉಲ್ಲಂಘನೆಗಾಗಿ ರಹಸ್ಯ ಚಟುವಟಿಕೆಗಳೆಂದು ಪರಿಗಣಿಸಲಾಗಿದೆ.
ದಾಳಿ ವೇಳೆ 3,49,747 ರಿಯಾಲ್ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಪಬ್ಲಿಕ್ ಪ್ರಾಸಿಕ್ಯೂಷನ್ ಗೆ ಹಸ್ತಾಂತರಿಸಲಾಗಿದೆ