ನಂಜರಾಯಪಟ್ಟಣ : ಭವ್ಯ ಭಾರತದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಎಸ್ಸೆಸ್ಸೆಫ್ ನಂಜರಾಯಪಟ್ಟಣ ಯುನಿಟ್ ವತಿಯಿಂದ ಧ್ವಜಾರೋಹಣ ಹಾಗೂ ಸೌಹಾರ್ದ ಸಂಗಮ ನಡೆಸಲಾಯಿತು. ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಿ.ಎಲ್ ವಿಶ್ವ ರವರು ಧ್ವಜಾರೋಹಣ ನೆರವೇರಿಸಿದರು.
ನಂತರ ಶಾಖಾ ಅಧ್ಯಕ್ಷರಾದ ಹಮೀದ್ ರವರ ಅಧ್ಯಕ್ಷತೆಯಲ್ಲಿ ನಡೆದ ಸೌಹಾರ್ದ ಸಂಗಮದಲ್ಲಿ ಶಾಖಾ ಕೋಶಾಧಿಕಾರಿ ಶುಫೈದ್ ರವರು ಎಲ್ಲರನ್ನೂ ಸ್ವಾಗತಿಸಿದರು.ಸಭೆಯ ಉದ್ಘಾಟನೆಯನ್ನು ಸೋಮವಾರಪೇಟೆ ಡಿವಿಷನ್ ಕೋಶಾಧಿಕಾರಿ ಹನೀಫ್ ಅಶ್ರಫಿ ರವರು ನಡೆಸಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಸಿ ಎಲ್ ವಿಶ್ವ ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಎಲ್ಲರೂ ಒಗ್ಗಟ್ಟಿನಿಂದ ಸೌಹಾರ್ದತೆ ಯೊಂದಿಗೆ ಬದುಕೋಣ , ಸ್ವಾತಂತ್ರ್ಯ ದಿನಾಚರಣೆಯ ಸಂದೇಶಗಳನ್ನು ಎಲ್ಲರಲ್ಲೂ ತಲುಪುವಂತೆ ಮಾಡಿ ಎಂದು ಕರೆ ನೀಡಿದರು. ನಂತರ ಅಫ್ಸಲ್ ಮುಸ್ಲಿಯಾರ್ ಸಂದೇಶ ಭಾಷಣವನ್ನು ನಡೆಸಿದರು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ನಂಜರಾಯಪಟ್ಟಣ ಯುನಿಟ್ ಕಾರ್ಯಕರ್ತರು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.
ಕೊನೆಯಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ರವರು ವಂದನಾರ್ಪಣೆ ಸಲ್ಲಿಸಿದರು.


