janadhvani

Kannada Online News Paper

ಯುಎಇ ಪ್ರಯಾಣಿಕರು 6 ಗಂಟೆಗಳ ಮುಂಚಿತವಾಗಿ ವಿಮಾನ ನಿಲ್ದಾಣಕ್ಕೆ ತಲುಪಬೇಕು

ಭಾರತದಿಂದ ಯುಎಇಗೆ ಹೊರಡುವ ಪ್ರಯಾಣಿಕರು ಕನಿಷ್ಠ 6 ಗಂಟೆಗಳ ಮುಂಚಿತವಾಗಿ ವಿಮಾನ ನಿಲ್ದಾಣಕ್ಕೆ ವರದಿ ಮಾಡಬೇಕು ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ತಿಳಿಸಿದೆ.

ರಾಪಿಡ್ ಪಿಸಿಆರ್ ಪರೀಕ್ಷೆ ನಿಮಿತ್ತ ಪ್ರಯಾಣಿಕರು ಬೇಗನೆ ಬರಬೇಕು. ವಿಮಾನ ಹೊರಡುವ 4 ಗಂಟೆಗಳ ಮೊದಲು ತಪಾಸಣೆ ಆರಂಭವಾಗಲಿದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಹೇಳಿದೆ.

48 ಗಂಟೆಗಳ ಪಿಸಿಆರ್ ಫಲಿತಾಂಶದ ಜೊತೆಗೆ, ಯುಎಇಗೆ ವಾಪಸಾತಿಗೆ ನಾಲ್ಕು ಗಂಟೆಗಳ ಒಳಗಿನ ರಾಪಿಡ್ ಪಿಸಿಆರ್ ಪರೀಕ್ಷಾ ಫಲಿತಾಂಶವೂ ಕಡ್ಡಾಯವಾಗಿದೆ.ರಾಪಿಡ್ ಪಿಸಿಆರ್ ತಪಾಸಣೆಯನ್ನು ಸಕಾಲದಲ್ಲಿ ಪೂರ್ಣಗೊಳಿಸಲು ನಿರ್ಗಮನಕ್ಕೆ ಕನಿಷ್ಠ ಆರು ಗಂಟೆಗಳ ಮೊದಲು ವಿಮಾನ ನಿಲ್ದಾಣಕ್ಕೆ ಬರಲು ಸೂಚಿಸಲಾಗಿದೆ.
ನಿರ್ಗಮನಕ್ಕೆ ನಾಲ್ಕು ಗಂಟೆಗಳ ಮೊದಲು ರಾಪಿಡ್ ಟೆಸ್ಟ್ ಆರಂಭವಾಗುತ್ತದೆ. ನಿರ್ಗಮನಕ್ಕೆ ಎರಡು ಗಂಟೆಗಳ ಮೊದಲು ರಾಪಿಡ್ ಟೆಸ್ಟ್ ಕೇಂದ್ರಗಳನ್ನು ಮುಚ್ಚಲಾಗುವುದು ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಹೇಳಿಕೆಯಲ್ಲಿ ತಿಳಿಸಿದೆ.

ಅಬುಧಾಬಿಯಲ್ಲಿ ಇಳಿಯುವವರು 12 ದಿನಗಳ ಕ್ವಾರಂಟೈನ್ ಹೊಂದಿರುತ್ತಾರೆ. ಅಧಿಕಾರಿಗಳು ಹೋಮ್ ಕ್ವಾರಂಟೈನ್ ಅಥವಾ ಸಾಂಸ್ಥಿಕ ಕ್ವಾರಂಟೈನ್ ಅನ್ನು ಸೂಚಿಸಬಹುದು. ಅಬುಧಾಬಿಗೆ ಆಗಮಿಸುವವರು ಆರನೇ ಮತ್ತು ಹನ್ನೊಂದನೇ ದಿನದಂದು ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು.

ರಾಸ್ ಅಲ್ ಖೈಮಾಕ್ಕೆ ಆಗಮಿಸುವವರು ಹತ್ತು ದಿನಗಳ ಹೋಮ್ ಕ್ವಾರಂಟೈನ್ ಹೊಂದಿರುತ್ತಾರೆ. ಪಿಸಿಆರ್ ಪರೀಕ್ಷೆಯನ್ನು ನಾಲ್ಕನೇ ಮತ್ತು ಎಂಟನೇ ದಿನದಂದು ನಡೆಸಬೇಕು. ಎರಡೂ ವಿಮಾನ ನಿಲ್ದಾಣಗಳಲ್ಲಿ ಕೈಗೆ ಟ್ರ್ಯಾಕಿಂಗ್ ವಾಚ್ ಧರಿಸಲಾಗುತ್ತದೆ ಎಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ತಿಳಿಸಿದೆ.

ಶಾರ್ಜಾ ಮತ್ತು ದುಬೈನಲ್ಲಿ ಇಳಿಯುವವರಿಗೆ,ವಿಮಾನ ನಿಲ್ದಾಣದಲ್ಲಿನ ಪಿಸಿಆರ್ ಪರೀಕ್ಷೆಯ ಫಲಿತಾಂಶದವರೆಗೆ ಅಥವಾ 24 ಗಂಟೆಗಳ ಕ್ವಾರಂಟೈನ್ ಇರಲಿದೆ.

error: Content is protected !! Not allowed copy content from janadhvani.com