ನಾಪೋಕ್ಲು,ಆ.5: ಎಸ್ಎಸ್ಎಫ್ ಸಂಘಟನೆ ರಕ್ತದಾನದ ಮಹತ್ವವನ್ನು ಅರಿತು ವಿವಿಧೆಡೆಗಳಲ್ಲಿ ಆಗಾಗ್ಗೆ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಮಡಿಕೇರಿ ವೈದ್ಯಕೀಯ ಕಾಲೇಜಿನ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿಗಳಾದ ಡಾ.ಕರುಂಬಯ್ಯ ಹೇಳಿದರು.
ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಶನ್(SSF) ಇದರ ಅಧೀನದ ಬ್ಲಡ್ ಸೈಬೋ ಇಂದು(05-08-2021) ಎಮ್ಮೆಮಾಡು ಎಸ್ಎಸ್ಎಫ್‌ನ ವಿವಿಧ ಶಾಖೆಗಳ ವತಿಯಿಂದ ಹಮ್ಮಿಕೊಂಡಿತ್ತು. ರಕ್ತದಾನ ಶಿಬಿರವನ್ನುದ್ದೇಶಿಸಿ ಮಾತನಾಡಿದ ಅವರು ಇತ್ತೀಚೆಗೆ ರಕ್ತದ ಬೇಡಿಕೆ ಹೆಚ್ಚಾಗುತ್ತಿದ್ದು ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಿ ನಮ್ಮೊಂದಿಗೆ ಸದಾ ಸಹಕರಿಸುತ್ತ ಬಹಳ ಅಚ್ಚುಕಟ್ಟಾಗಿ ರಕ್ತದಾನ ಶಿಬಿರಗಳನ್ನು ನಿರ್ವಹಿಸುತ್ತಿರುವ ಸಂಘಟನೆಯಾಗಿದೆ ಎಸ್ಎಸ್ಎಫ್ ಎಂದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಹಾರಿಸ್ ಮುಸ್ಲಿಯಾರ್ ವಹಿಸಿದ್ದರು.
ಉದ್ಘಾಟನಾ ಭಾಷಣವನ್ನು ಮಾಡಿದ ಎಸ್ಎಸ್ಎಫ್ ಕೊಡಗು ಜಿಲ್ಲಾಧ್ಯಕ್ಷರಾದ ಶಾಫೀ ಸಅದಿ ಸೋಮವಾರಪೇಟೆಯವರು ಮಾತನಾಡಿ ಎಸ್ಎಸ್ಎಫ್ ಬ್ಲಡ್ ಸೈಬೋ ಈಗಾಗಲೇ ರಾಜ್ಯದಾದ್ಯಂತ ಮುನ್ನೂರಕ್ಕೂ ಹೆಚ್ಚು ರಕ್ತದಾನ ಶಿಬಿರಗಳನ್ನು ಹಮ್ಮಿಕೊಂಡು 30 ಸಾವಿರಕ್ಕಿಂತಲೂ ಹೆಚ್ಚು ರಕ್ತದ ಯೂನಿಟ್ ಗಳನ್ನು ದಾನ ಮಾಡಿದೆ,ಅನಿವಾರ್ಯ ಸಂದರ್ಭಗಳಲ್ಲಿ ಇನ್ನು ಕೂಡ ರಕ್ತದಾನ ಮಾಡಲು ಸಿದ್ಧರಿದ್ದು, ಹಳ್ಳಿಹಳ್ಳಿಗಳಲ್ಲಿ ರಕ್ತದಾನದ ಮಹತ್ವ ಮತ್ತು ಅನಿವಾರ್ಯತೆಯ ಕುರಿತು ಅರಿವು ಮೂಡಿಸುವ ಕಾರ್ಯವನ್ನು ಮಾಡಲಿದೆ ಎಂದರು.
ಸಭೆಯಲ್ಲಿ ಅತಿಥಿಗಳಾಗಿ ಸೈಫುದ್ದೀನ್ ತಂಙ್ಙಳ್, ಎಸ್‌ವೈಎಸ್ ಬ್ರಾಂಚ್ ಅಧ್ಯಕ್ಷರಾದ ಅಬ್ದುಲ್ ರಹಿಮಾನ್, ಎಸ್ಎಸ್ಎಫ್ ಜಿಲ್ಲಾ ನಾಯಕ ಶೌಖತ್, ಸೆಕ್ಟರ್ ಅಧ್ಯಕ್ಷರಾದ ನಝೀರ್ ಬಾಖವಿ, , ಗ್ರಾಮ ಪಂಚಾಯಿತಿ ಸದಸ್ಯರಾದ ಇಸ್ಮಾಯಿಲ್ ಚಕ್ಕರ, ಯೂಸುಫ್ ಪಡಿಯಾಣಿ,ಗಫೂರ್ ಪಡಿಯಾಣಿ ಹಾಗೂ ಅಹ್ಮದ್ ಮಾಸ್ಟರ್,ಝಕರಿಯಾ ಜೌಹರಿ ಇನ್ನಿತರರು ಉಪಸ್ಥಿತರಿದ್ದರು.ಸಮೀಹ್ ತಂಙ್ಙಳ್ ಸ್ವಾಗತಿಸಿ ಕಾರ್ಯಕ್ರಮದ ಕೊನೆಯಲ್ಲಿ ಕೃತಜ್ಞತೆ ಸಲ್ಲಿಸಿದರು.







