janadhvani

Kannada Online News Paper

ಭಾರತ ಸಹಿತ ರೆಡ್‌ಲಿಸ್ಟ್ ದೇಶಗಳಿಂದ ಆಗಮಿಸುವವರಿಗೆ ಪಿಸಿಆರ್ ಟೆಸ್ಟ್‌ನಲ್ಲಿ ವಿನಾಯಿತಿ

ದೋಹಾ: ಭಾರತ ಸೇರಿದಂತೆ ರೆಡ್‌ಲಿಸ್ಟ್ ನಲ್ಲಿರುವ ದೇಶಗಳಿಂದ ಬರುವವರಿಗೆ ದೋಹಾ ವಿಮಾನ ನಿಲ್ದಾಣದಲ್ಲಿ ಕಡ್ಡಾಯ ಆರ್‌ಟಿಪಿಸಿಆರ್ ಪರೀಕ್ಷೆಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವರ್ಗಾಯಿಸಲಾಗುತ್ತಿದೆ.
ಹೊಸ ಹೊಸ ನಿಯಮ ಪ್ರಕಾರ ದೋಹಾದಲ್ಲಿ ಇಳಿದ 36 ಗಂಟೆಗಳ ಒಳಗೆ ಪರೀಕ್ಷೆಯನ್ನು ನಡೆಸಬೇಕು.

ಈ ಹಿಂದೆ,ರೆಡ್‌ಲಿಸ್ಟ್ ದೇಶಗಳಿಂದ ಖತಾರ್‌ಗೆ ಆಗಮಿಸುವವರು ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಟ್ಟ ನಂತರವೇ ದೋಹಾ ವಿಮಾನ ನಿಲ್ದಾಣದಿಂದ ಹೊರಹೋಗಲು ಅನುಮತಿಸಲಾಗುತ್ತಿತ್ತು.ಅದಕ್ಕಾಗಿ ವಿಮಾನ ನಿಲ್ದಾಣದ ಒಳಗೆ ಪರೀಕ್ಷಾ ಸೌಲಭ್ಯವನ್ನು ಸ್ಥಾಪಿಸಲಾಗಿತ್ತು.

ಇದೀಗ, ದೋಹಾದಲ್ಲಿ ಇಳಿದ 36 ಗಂಟೆಗಳ ಒಳಗೆ ಪರೀಕ್ಷೆಯನ್ನು ನಡೆಸಬೇಕು. ಇದರ ಭಾಗವಾಗಿ ವಿಮಾನ ನಿಲ್ದಾಣಕ್ಕೆ ಬರುವ ಎಲ್ಲ ಪ್ರಯಾಣಿಕರ ವಿವರಗಳನ್ನು ಪಿಎಚ್‌ಸಿಸಿಗಳಿಗೆ ರವಾನಿಸಲಾಗುತ್ತದೆ.ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಯಾಣಿಕರ ದಾಖಲೆಗಳಲ್ಲಿ ವಿಶೇಷ ಸ್ಟಿಕ್ಕರ್ ಅಂಟಿಸಿದ್ದಾರೆ.

ಪ್ರಸ್ತುತ 18 ಪಿಎಚ್‌ಸಿಸಿಗಳಲ್ಲಿ ಲಭ್ಯವಿದೆ. ಜುಲೈ 26 ರ ನಂತರ 27 ಕೇಂದ್ರಗಳಲ್ಲಿ ಸೌಲಭ್ಯ ಒದಗಿಸಲು ನಿರ್ಧರಿಸಲಾಗಿದೆ. ಪರೀಕ್ಷೆಯ ಶುಲ್ಕ 300 ಕತಾರ್ ರಿಯಾಲ್ಸ್. ವಯಸ್ಕರು ಮತ್ತು ಮಕ್ಕಳಿಗೆ ಪರೀಕ್ಷೆ ಕಡ್ಡಾಯವಾಗಿದೆ. ಪರೀಕ್ಷೆಗೆ ಹಾಜರಾಗದವರ ಹೆಸರನ್ನು ಅಧಿಕಾರಿಗಳಿಗೆ ಹಸ್ತಾಂತರಿಸುವಂತೆ ಪಿಎಚ್‌ಸಿಸಿಗಳಿಗೆ ನಿರ್ದೇಶಿಸಲಾಗಿದೆ.

error: Content is protected !! Not allowed copy content from janadhvani.com