ದಮ್ಮಾಮ್: ಕೆಸಿಎಫ್ ಅಲ್ ಹಸ್ಸ ಸೆಕ್ಟರ್‌ನ ನೂತನ ಕಛೇರಿ ಮತ್ತು ಈದ್ ಮೀಟ್ ಕಾರ್ಯಕ್ರಮ ಈದ್ ನಮಾಝ್ ಬಳಿಕ ಹಬೀಬ್ ಮುಸ್ಲಿಯಾರ್ ಮರ್ಧಳರವರ ಅಧ್ಯಕ್ಷತೆಯಲ್ಲಿ ನಡೆಯಿತು.
ನೂತನ ಕಛೇರಿಯನ್ನು ಸೆಕ್ಟರ್ ಅಧ್ಯಕ್ಷ ಹಬೀಬ್ ಮುಸ್ಲಿಯಾರ್ ಉದ್ಘಾಟಿಸಿದರು.
ಮುಖ್ಯ ಭಾಷಣಗಾರರಾಗಿ ಮಾತನಾಡಿದ ದಮ್ಮಾಮ್ ಝೋನ್ ಅಧ್ಯಕ್ಷ ಅಬ್ದುರ್ರಶೀದ್ ಸಖಾಫಿ ಮಿತ್ತೂರು, ಪ್ರವಾದಿ ಇಬ್ರಾಹಿಂ ಅ.ಸ. ಅವರ ಜೀವನದಲ್ಲಿ ನಡೆದಿದ್ದ ಘಟನೆಯೊಂದರ ನೆನಪಿನಲ್ಲಿ ಪ್ರಾಣಿಬಲಿ ನೀಡಲಾಗುತ್ತದೆ.
ಅಲ್ಲಾಹನ ಆದೇಶದಂತೆ ಇಬ್ರಾಹಿಂ ಅ.ಸ. ಅವರು ತಮ್ಮ ಪುತ್ರ ಇಸ್ಮಾಯಿಲ್ ಅವರನ್ನು ಬಲಿಯರ್ಪಿಸಲು ಮುಂದಾಗುತ್ತಾರೆ.
ಅಲ್ಲಾಹನ ಇಚ್ಛೆಯಂತೆ ತಮ್ಮ ಮಗನನ್ನೇ ಬಲಿದಾನ ನೀಡಲು ಸಿದ್ಧವಾಗಿದ್ದ ಇಬ್ರಾಹಿಂ ಅ.ಸ. ಅವರ ಭಕ್ತಿಯನ್ನು ಅಲ್ಲಾಹನು ಮೆಚ್ಚಿ ಪುತ್ರನ ಬದಲು ಒಂದು ಆಡನ್ನು ಬಲಿಯಾಗಿ ಅರ್ಪಿಸುವಂತೆ ಸೂಚಿಸುತ್ತಾರೆ. ಇಬ್ರಾಹಿಂ ಅ.ಸ. ಅವರ ತ್ಯಾಗದ ಸ್ಮರಣಾರ್ಥ ಹಬ್ಬದ ದಿನ ಅಥವಾ ನಂತರದ ಮೂರು ದಿನಗಳಲ್ಲಿ ಜಾನುವಾರು ಬಲಿಯನ್ನು ಅರ್ಪಿಸಲಾಗುತ್ತದೆ ಎಂದು
ಸೈಯ್ಯಿದ್ ಇಬ್ರಾಹಿಮ್ ಅ.ಸ.ರವರ ತ್ಯಾಗ ಮಯ ಜೀವನದ ಅತ್ಯುಜ್ವಳ ಜೀವನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ವಿವರಿಕೊಟ್ಟು ನೂತನ ಕಛೇರಿಗೆ ಶುಭ ಹಾರೈಸಿದರು.
ದಮ್ಮಾಮ್ ಝೋನ್ ಕೋಶಾಧಿಕಾರಿ ಇಬ್ರಾಹಿಮ್ (ಚೌಕ) ನೂತನ ಕಛೇರಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಅಲ್ ಹಸ್ಸ ಸೆಕ್ಟರ್ ಪ್ರ. ಕಾರ್ಯದರ್ಶಿ ಹಾರೀಸ್ ಕಾಜೂರು,ಝೋನ್ ನಾಯಕ ಇಕ್ಬಾಲ್ ಗುಲ್ವಾಡಿ ಮತ್ತು ರಾಷ್ಟ್ರೀಯ ನಾಯಕ ಅಸ್ರು ಬಜ್ಪೆ ಉಪಸ್ಥಿತಿಯಿದ್ದರು.
ಕಾರ್ಯಕ್ರಮವನ್ನು ಇಸ್ಹಾಕ್ ಸಿ.ಐ. ಫಜೀರ್ ಸ್ವಾಗತಿಸಿ, ಇಕ್ಬಾಲ್ ಜಿ.ಕೆ.ಗುಲ್ವಾಡಿ ಧ್ಯನ್ಯವಾದಗೈದರು