janadhvani

Kannada Online News Paper

ದುಬೈ: ಈದುಲ್ ಅದ್’ಹಾ ಪ್ರಯುಕ್ತ 4 ದಿನಗಳ ಪಾರ್ಕಿಂಗ್ ಉಚಿತ

ದುಬೈ: ಈದ್ ಅಲ್-ಅದ್ಹಾ ಪ್ರಯುಕ್ತ ದುಬೈನಲ್ಲಿ ನಾಲ್ಕು ದಿನಗಳವರೆಗೆ ಉಚಿತ ಪಾರ್ಕಿಂಗ್ ಅನುಮತಿಸಲಾಗುವುದು. ಜುಲೈ 19 ರಿಂದ 22 ರವರೆಗೆ (ದುಲ್ ಹಜ್ 9 ರಿಂದ 12) ಉಚಿತ ಪಾರ್ಕಿಂಗ್ ಲಭ್ಯವಿರುತ್ತದೆ. ಅದೇ ಸಮಯದಲ್ಲಿ,ಬಹು-ಹಂತದ ಪಾರ್ಕಿಂಗ್ ಟರ್ಮಿನಲ್‌ಗಳಲ್ಲಿ ಎಂದಿನಂತೆ ಪಾರ್ಕಿಂಗ್ ಶುಲ್ಕವನ್ನು ವಿಧಿಸಲಾಗುತ್ತದೆ.

ಅರಾಫಾ ದಿನ ಮತ್ತು ತ್ಯಾಗದ ಹಬ್ಬವಾದ ಈದುಲ್ ಅದ್ಹಾ ಪ್ರಯುಕ್ತ ಯುಎಇ ಮುಂದಿನ ವಾರ ನಾಲ್ಕು ದಿನಗಳ ರಜೆ ಘೋಷಿಸಿದೆ. ವಾರಾಂತ್ಯದ ರಜಾದಿನಗಳನ್ನು ಗಣನೆಗೆ ತೆಗೆದುಕೊಂಡರೆ, ಆರು ದಿನಗಳ ರಜೆ ಲಭಿಸಲಿದೆ.