ವಿಟ್ಲ, ಜು.1: ಜನತೆಯ ಆರೋಗ್ಯ ರಕ್ಷಣೆಗೆ ಸ್ವಯಂ ಮರೆತು ಹಗಲಿರುಳು ದುಡಿಯುವ ವೈದ್ಯರು ಸಮಾಜದ ನಿಜವಾದ ಹೀರೋಗಳು ಎಂಬ ದ್ಯೇಯ ವಾಕ್ಯದೊಂದಿಗೆ ಕರ್ನಾಟಕ ರಾಜ್ಯ SჄS ಇಸಾಬ ಟೀಂ ವಿಟ್ಲ ಸೆಂಟರ್ ವತಿಯಿಂದ ನ್ಯಾಷನಲ್ ಡಾಕ್ಟರ್ಸ್ ಡೇ ಅಂಗವಾಗಿ ಕೊರೋನ ಕಾಲದಲ್ಲಿ ತನ್ನ ಜೀವದ ಹಂಗು ತೊರೆದು ಕಾರ್ಯಾಚರಿಸಿದ ಡಾಕ್ಟರ್ ಗಳನ್ನು ಗೌರವಿಸಲಾಯಿತು.
ವಿಟ್ಲ ಪರಿಸರದ ಸುಮಾರು ಹತ್ತಕ್ಕೂ ಮಿಕ್ಕ ವೈದ್ಯಾಧಿಕಾರಿಗಳನ್ನು ಹೂಗುಚ್ಛ ನೀಡಿ ಗೌರವಿಸಿ ಅಭಿನಂದಿಸುವ ಕಾರ್ಯಕ್ರಮವು SჄS ವಿಟ್ಲ ಸೆಂಟರ್ ಟೀಮ್ ಇಸಾಬ ಅಮೀರ್ K A ಇಬ್ರಾಹಿಂ ಮುಸ್ಲಿಯಾರ್ ಟಿಪ್ಪು ನಗರ ಕೊಡಂಗಾಯಿ. ಹಾಗು SჄS ವಿಟ್ಲ ಸೆಂಟರ್ ಕೋಶಾಧಿಕಾರಿ ಮುಸ್ತಾಫಾ ಕೋಡಪದವು. SჄS ಜಿಲ್ಲಾ ನಾಯಕರಾದ ಇಸ್ಮಾಯಿಲ್ ಮಾಷ್ಟ್ರ್ ಮಂಗಲಪದವು. SჄS ವಿಟ್ಲ ಸೆಂಟರ್ ಪ್ರದಾನ ಕಾರ್ಯದರ್ಶಿ ಉಸ್ಮಾನ್ ಹಾಜಿ ಸೆರ್ಕಳ, ಹಾರಿಸ್ ಒಕ್ಕೆತೂರು, ರಹೀಮ್ ಸಖಾಫಿ ವಿಟ್ಲ, ರಫೀಕ್ ಒಕ್ಕೆತೂರ್, ಸತ್ತಾರ್ ಕಂಬಳಬೆಟ್ಟು. ಇವರ ಉಪಸ್ಥಿತಿಯಲ್ಲಿ ನಡೆಯಿತು.
ವರದಿ : D.A ಮುಹಮ್ಮದ್ ಅಶ್ರಫ್ ಕೊಡಂಗಾಯಿ