janadhvani

Kannada Online News Paper

ಗುರುವಾಯನಕೆರೆ ಕೇಂದ್ರ ಜುಮಾ ಮಸ್ಜಿದ್ – ಗಲ್ಫ್ ಕಮಿಟಿ ಅಸ್ತಿತ್ವಕ್ಕೆ

ಹಝ್ರತ್ ಹಯಾತುಲ್ ಅವುಲಿಯಾ ಜುಮಾ ಮಸೀದಿ ಗುರುವಾಯನಕೆರೆ, ಜಮಾಅತ್ ನ ಅಧೀನದಲ್ಲಿ ಬರುವ ಅಲಾದಿ,ಜಿ.ಕೆರೆ,ಕೋಂಟುಪಲ್ಕೆ,ಮೇಲಂತಬೆಟ್ಟು ಹಾಗೂ ಬಳಂಜ ವ್ಯಾಪ್ತಿಯ ಎಲ್ಲಾ ಗಲ್ಫ್ ನಿವಾಸಿಗಳ ಸಂಘಟನೆ *ಗಲ್ಫ್ ಕಮಿಟಿ ಗುರುವಾಯನಕೆರೆ (ಜಿ.ಕೆರೆ*) ಯನ್ನು ಇತ್ತೀಚೆಗೆ ರಚಿಸಲಾಯಿತು.

ಸೌದಿಅರೆಬಿಯಾ,ಯುನೈಟೆಡ್ ಅರಬ್ ಎಮಿರೇಟ್ಸ್ (UAE),ಕತ್ತಾರ್,ಕುವೈತ್ ‌ಸೇರಿದಂತೆ ವಿವಿಧ ಗಲ್ಫ್ ದೇಶಗಳಲ್ಲಿರುವ ಒಟ್ಟು 35 ಸದಸ್ಯರ ಸಮಿತಿಯನ್ನು ರಚಿಸಲಾಯಿತು.
ಗಲ್ಫ್ ಸಮಿತಿ ಜಿ.ಕೆರೆ ಇದರ ನೂತನ ಅಧ್ಯಕ್ಷರಾಗಿ ಸಲೀಮ್Gk ಗುರುವಾಯನಕೆರೆ (ಜಿಝಾನ್, KSA) , ಉಪಾಧ್ಯಕ್ಷರಾಗಿ ಅನ್ವರ್ ಮೇಲಂತಬೆಟ್ಟು(ದಮ್ಮಾಮ್ KSA), ಪ್ರಧಾನ ಕಾರ್ಯದರ್ಶಿಯಾಗಿ K.A. ಅಬ್ಬಾಸ್ ಬಳಂಜ(ಕುವೈತ್) , ಜತೆ ಕಾರ್ಯದರ್ಶಿಯಾಗಿ ಅಬ್ಬಾಸ್ ಹೊಟೆಲ್ ಜಿ.ಕೆರೆ(ಅಲ್ ರಾಸ್ KSA) ಆಯ್ಕೆ ಯಾದರು.

ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಜಮಾಅತ್ ಕಮಿಟಿ ಅಧ್ಯಕ್ಶರಾದ ಲತೀಫ್ ಹಾಜಿ SMS, ಹಾಗೂ ಪ್ರಧಾನ ಕಾರ್ಯದರ್ಶಿ ಅಯ್ಯೂಬ್ ಶಾಫಿ ನಡೆಸಿಕೊಟ್ಟರು.. ಜಮಾಅತ್ ಖತೀಬರು ಹಾಗೂ ಬೆಳ್ತಂಗಡಿ ತಾಲೂಕು ಸುನ್ನಿ ಸಂಯುಕ್ತ ಜಮಾಅತ್ ಅಧ್ಯಕ್ಶರಾದ ಅಸಯ್ಯದ್ ಅಬ್ದುಲ್ ರಹ್ಮಾನ್ ಸಾದತ್ ತಂಞಳ್ ರವರು ನೂತನ ಗಲ್ಪ್ ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ ಶುಭ ಹಾರೈಸಿ ದುವಾ ಆಶೀರ್ವಚನ ನಡೆಸಿದರು.

error: Content is protected !! Not allowed copy content from janadhvani.com