ರಿಯಾದ್: ವಲಸೆ, ಉದ್ಯೋಗ ಮತ್ತು ಗಡಿ ಭದ್ರತಾ ನಿಯಮಗಳನ್ನು ಉಲ್ಲಂಘಿಸುವವರ ಬಗ್ಗೆ ಭದ್ರತಾ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ದೇಶದ ಎಲ್ಲ ನಾಗರಿಕರು ಮತ್ತು ವಲಸಿಗರನ್ನು ಸೌದಿ ಆಂತರಿಕ ಸಚಿವಾಲಯ ಕೇಳಿದೆ.
ಮಕ್ಕಾ ಮತ್ತು ರಿಯಾದ್ ಪ್ರಾಂತ್ಯದ ಜನರು 911 ಗೆ ಕರೆ ಮಾಡಲು ಮತ್ತು ದೇಶದ ಇತರ ಭಾಗಗಳಲ್ಲಿರುವವರು 999 ಗೆ ಕರೆ ಮಾಡಲು ಯಾವುದೇ ಅಕ್ರಮ ಚಟುವಟಿಕೆ ಕಂಡುಬಂದರೆ ಅಧಿಕಾರಿಗಳನ್ನು ಸಂಪರ್ಕಿಸಲು ಸಚಿವಾಲಯ ಕೇಳಿದೆ.ಆರೋಪಿಗಳಿಗೆ 15 ವರ್ಷಗಳವರೆಗೆ ಜೈಲು ವಾಸ ಮತ್ತು 1 ಮಿಲಿಯನ್ ರಿಯಾಲ್ ದಂಡ ವಿಧಿಸಲಾಗುತ್ತದೆ ಎಂದು ಸಚಿವಾಲಯ ಎಚ್ಚರಿಸಿದೆ.
ಸೌದಿ ಅರೇಬಿಯಾಕ್ಕೆ ಪ್ರವೇಶಿಸುವ ಅಥವಾ ದೇಶದೊಳಗೆ ಅಕ್ರಮ ವಲಸಿಗರಿಗೆ ಸಾರಿಗೆ ಒದಗಿಸುವವರೂ ಜೈಲು ಮತ್ತು ದಂಡವನ್ನು ಎದುರಿಸಬೇಕಾಗುತ್ತದೆ.
ಜೈಲು ಶಿಕ್ಷೆ ಮತ್ತು ದಂಡದ ಜೊತೆಗೆ, ಅವರಿಗೆ ಪ್ರಯಾಣಿಸಲು ಅನುವುಮಾಡಿಕೊಡುವ ವಾಹನ ಮತ್ತು ಆಶ್ರಯ ನೀಡುವ ವಾಸ ಸ್ಥಳವನ್ನೂ ಮುಟ್ಟುಗೋಲು ಹಾಕಲಾಗುವುದು. ಅಪರಾಧಿಗಳ ವೆಚ್ಚದಲ್ಲೇ ಸ್ಥಳೀಯ ಮಾಧ್ಯಮಗಳಲ್ಲಿ ಅಪರಾಧವನ್ನು ಪ್ರಕಟಿಸಲಾಗುವುದು. ಇಂತಹ ಅಪರಾಧಗಳನ್ನು ದೇಶದ ಘನತೆ ಮತ್ತು ಸುರಕ್ಷತೆಯನ್ನು ಉಲ್ಲಂಘಿಸುವ ಪ್ರಮುಖ ಅಪರಾಧಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ ಎಂದು ಎಚ್ಚರಿಕೆಯಲ್ಲಿ ತಿಳಿಸಲಾಗಿದೆ.
ಕಳೆದ ಶನಿವಾರ ಸಚಿವಾಲಯ ಬಿಡುಗಡೆ ಮಾಡಿದ ವರದಿಯಲ್ಲಿ ವಲಸೆ ಕಾನೂನುಗಳು, ಕಾರ್ಮಿಕ ಕಾನೂನುಗಳು ಮತ್ತು ಗಡಿ ಭದ್ರತೆಯನ್ನು ಉಲ್ಲಂಘಿಸಿದ್ದಕ್ಕಾಗಿ 2017 ರ ನವೆಂಬರ್ನಿಂದ 5.6 ದಶಲಕ್ಷಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಈ ಪೈಕಿ 15,53,667 ಜನರನ್ನು ಗಡೀಪಾರು ಮಾಡಲಾಗಿದೆ.