ಚಿಕ್ಕಮಗಳೂರು ಜೂ 21: ಎಸ್ ಎಸ್ ಎಫ್ ಕರ್ನಾಟಕ ರಾಜ್ಯ ಸಮಿತಿಯು ರಾಜ್ಯದಾದ್ಯಂತ ಜಿಲ್ಲಾಮಟ್ಟದಲ್ಲಿ ಮುತಅಲ್ಲಿಮರಿಗಾಗಿ ಅಧ್ಯಾತ್ಮಿಕ ನಾಯಕ ಶೈಖ್ ಝೈನುದ್ಧೀನ್ ಮಖ್ದೂಂ(ರ) ರವರ ಸ್ಮರಣಾರ್ಥ ಹಮ್ಮಿಕೊಂಡಿರುವ “ಮಖ್ದೂಮಿಯ ಸಮ್ಮಿಟ್” ನಾಳೆಯಿಂದ ಆನ್ಲೈನ್ ನಲ್ಲಿ ನಡೆಯಲಿದೆ.
ಜಿಲ್ಲೆಯಲ್ಲಿನ ಧಾರ್ಮಿಕ ವಿದ್ಯಾಬ್ಯಾಸ ನಿರತರಾದ ಮುತಅಲ್ಲಿಮರು ಭಾಗವಹಿಸುವ ಈ ಕಾರ್ಯಕ್ರಮವು ಜೂನ್ ತಿಂಗಳ 21, 22, 23 ದಿನಾಂಕಗಳಲ್ಲಿ ವಿವಿಧ ವಿದ್ವಾಂಸರ ತರಗತಿಗಳೊಂದಿಗೆ ನಡೆಯಲಿದೆ. ಪ್ರತಿ ದಿನ ರಾತ್ರಿ 09:00ಕ್ಕೆ ಝೂಮ್ ಅಪ್ಲಿಕೇಶನ್ ಹಾಗೂ ಯೂಟ್ಯೂಬ್ ನಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ.
ಕಾರ್ಯಕ್ರಮದ ವಿವರ:
ಜೂನ್ 21 ಸೋಮವಾರ
ದುಆ: ಅಸ್ಸಯ್ಯಿದ್ ಎಪಿಎಸ್ ತಂಙಳ್ ಉಪ್ಪಳ್ಳಿ
ಉದ್ಘಾಟನೆ: ಅಬ್ದುಲ್ ಲತೀಫ್ ಸ ಅದಿ ಶಿವಮೊಗ್ಗ
ಪ್ರಾಸ್ತಾವಿಕ ಭಾಷಣ: NC ರಹೀಂ ಉಡುಪಿ
ವಿಷಯ ಮಂಡನೆ: ಶಾಫಿ ಸಖಾಫಿ ಮಂಡಂಬ್ರ
ವಿಷಯ: ವಿದ್ವಾಂಸರ ಜೀವನ
ಜೂನ್ 22 ಮಂಗಳವಾರ
ದುಆ: ಅಸ್ಸಯ್ಯಿದ್ ಹಾಮೀಂ ತಂಙಳ್
ಉದ್ಘಾಟನೆ: ಕೆ.ಎಂ ಮುಸ್ತಫ ನಈಮಿ ಹಾವೇರಿ
ಪ್ರಾಸ್ತಾವಿಕ ಮಾತು: ಯಾಕೂಬ್ ಮಾಸ್ಟರ್ ಕೊಡಗು
ವಿಷಯ ಮಂಡನೆ: ಶೈಖುನಾ ಹಂಝಕ್ಕೋಯ ಬಾಖವಿ ಅಲ್ ಕಾಮಿಲ್ ಕಡಲುಂಡಿ
ವಿಷಯ: ಮುತ ಅಲ್ಲಿಂ, ಇಮಾಂ ಗಝ್ಝಾಲಿ (ರ) ರವರ ವೀಕ್ಷಣೆಯಲ್ಲಿ
ಜೂನ್ 22 ಬುಧವಾರ
ದುಆ: ಅಸ್ಸಯ್ಯಿದ್ ಅಲವೀ ತಂಙಳ್ ಕರ್ಕಿ
ಉದ್ಘಾಟನೆ: ಹಾಫಿಝ್ ಸುಫ್ಯಾನ್ ಸಖಾಫಿ ಕೊಪ್ಪಳ
ಪ್ರಾಸ್ತಾವಿಕ ಮಾತು: ಮುಬಶ್ಯಿರ್ ಅಹ್ಸನಿ ಕೊಂಡಂಗೇರಿ
ವಿಷಯ ಮಂಡನೆ: ನೌಫಲ್ ಸಖಾಫಿ ಕಳಸ
ವಿಷಯ: ದಅ್‌ವಾ ಸಂಘಟನೆಯಲ್ಲಿ ಸಕ್ರೀಯತೆ
ಮೂರು ದಿನಗಳ ಈ ಕಾರ್ಯಕ್ರಮದ ಅಧ್ಯಕ್ಷತೆ ಜಿಲ್ಲಾಧ್ಯಕ್ಷರಾದ ಝೈನುಲ್ ಆಬಿದ್ ಸಖಾಫಿ ಮಾಗುಂಡಿ ವಹಿಸಲಿದ್ದಾರೆ. ಸಫ್ವಾನ್ ಸಖಾಫಿ ಶಾಂತಿಪುರ ಸ್ವಾಗತಸಿ, ಮುಹಮ್ಮದ್ ಸಫ್ವಾನ್ ವಿಜಯಪುರ ನಿರೂಪಣೆ ಮಾಡಲಿದ್ದಾರೆ ಎಂದು ಜಿಲ್ಲಾ ಮಾದ್ಯಮ ಕಾರ್ಯದರ್ಶಿ ಹಾರಿಸ್ ಮಾಗುಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.