ರಿಯಾದ್ :ಈ ವರ್ಷದ ಹಜ್ ತೀರ್ಥಯಾತ್ರೆಗೆ ಅರ್ಜಿ ಸಲ್ಲಿಸಿ, ಆಯ್ಕೆಯಾದವರು ಮೂರು ಗಂಟೆಗಳಲ್ಲಿ ಹಣ ಪಾವತಿಸಿ ಬುಕಿಂಗ್ ಪೂರ್ಣಗೊಳಿಸಬೇಕು ಎಂದು ಹಜ್ ಮತ್ತು ಉಮ್ರಾ ಸಚಿವಾಲಯ ಹೇಳಿದೆ.
ಈ ವರ್ಷದ ಹಜ್ಗಾಗಿ ಸೌದಿ ಅರೇಬಿಯಾದಿಂದ 20 ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ನಿರೀಕ್ಷಿಸಲಾಗಿದೆ ಎಂದು ಹಜ್ ಸಚಿವಾಲಯ ತಿಳಿಸಿದೆ. ಹಜ್ ಮತ್ತು ಉಮ್ರಾ ಉಪ ಸಚಿವ ಡಾ. ಅಬ್ದುಲ್ ಫತ್ತಾಹ್ ಮುಷತ್ ಇದನ್ನು ವಿವರಿಸಿದರು. ಈ ವರ್ಷದ ಹಜ್ ತೀರ್ಥಯಾತ್ರೆಗೆ ಅರ್ಜಿ ಸಲ್ಲಿಸಿದವರು ಆಯ್ಕೆಯಾದ ಮೂರು ಗಂಟೆಗಳಲ್ಲಿ ಹಣ ಪಾವತಿಸಿ ಬುಕಿಂಗ್ ಪೂರ್ಣಗೊಳಿಸಬೇಕು ಎಂದು ಸಚಿವರು ಹೇಳಿದರು.
ದೇಶಾದ್ಯಂತ ಸುಮಾರು 20 ಲಕ್ಷ ಜನರು ಹಜ್‌ಗೆ ಅರ್ಜಿ ಸಲ್ಲಿಸುವುದಾಗಿ ಸಚಿವಾಲಯ ನಿರೀಕ್ಷಿಸಿದೆ. ಈ ಪೈಕಿ ಕೋವಿಡ್ ಮಾನದಂಡಗಳು ಮತ್ತು ಇತರ ಷರತ್ತುಗಳನ್ನು ಪೂರೈಸಿದ 60,000 ಮಂದಿಗೆ ಮಾತ್ರ ಅವಕಾಶ ನೀಡಲಾಗುವುದು. ಆದ್ದರಿಂದ, ಪ್ರಾಥಮಿಕ ನೋಂದಣಿ ಪೂರ್ಣಗೊಳಿಸಿದವರಿಂದ ಆಯ್ಕೆಯಾದವರಿಗೆ ಹಣ ಪಾವತಿಸಲು ಮತ್ತು ಅಂತಿಮ ನಿರ್ಧಾರವನ್ನು ಕೈಗೊಳ್ಳಲು ಕೇವಲ ಗಂಟೆಗಳ ಸಮಯವನ್ನು ಅನುಮತಿಸಲಾಗುವುದು ಎಂದು ಸಚಿವರು ಹೇಳಿದರು.
ನಿಗದಿತ ಗಂಟೆಗಳಲ್ಲಿ ಪಾವತಿಸದವರ ನೋಂದಣಿಯನ್ನು ಮುಂದೂಡಲಾಗುವುದು ಮತ್ತು ಮುಂದಿನ ಜನರಿಗೆ ಕ್ರಮವಾಗಿ ಅನುಮತಿ ನೀಡಲಾಗುವುದು. ಪಾವತಿ ನಂತರ ನೋಂದಣಿ ಪೂರ್ಣಗೊಳಿಸಿದವರಿಗೆ ಹಜ್ ಪರವಾನಗಿ ವೈಯಕ್ತಿಕ ಪೋರ್ಟಲ್ ಅಬ್ಶೀರ್‌ನಲ್ಲಿ ಲಭ್ಯವಾಗಲಿದೆ. ನಿನ್ನೆ ಪ್ರಾರಂಭವಾದ ಹಜ್ ನೋಂದಣಿ ಈ ತಿಂಗಳ 23 ರವರೆಗೆ ಮುಂದುವರಿಯಲಿದೆ.