ಕಾಪು ಜೂನ್ 14: ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ದ’ಅವಾ ವಿಭಾಗದಿಂದ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯು ರಾಜ್ಯಾದ್ಯಂತ ಜಿಲ್ಲಾಮಟ್ಟದಲ್ಲಿ ಮುತಅಲ್ಲಿಮರಿಗಾಗಿ ಅಧ್ಯಾತ್ಮಿಕ ನಾಯಕ ಶೈಖ್ ಝೈನುದ್ಧೀನ್ ಮಖ್ದೂಂ(ರ) ರವರ ಸ್ಮರಣಾರ್ಥ ಹಮ್ಮಿಕೊಂಡ “ಮಖ್ದೂಮಿಯ ಸಮ್ಮಿಟ್” ಸಮಾರೋಪ ಎಸ್ಸೆಸ್ಸೆಫ್ ಉಡುಪಿ ಜಿಲ್ಲಾಧ್ಯಕ್ಷರಾದ ಅಹ್ಮದ್ ಶಬೀರ್ ಸಖಾಫಿ ಯವರ ಅಧ್ಯಕ್ಷತೆಯಲ್ಲಿ ಜೂನ್ 14, ಇಂದು ರಾತ್ರಿ 9 ಗಂಟೆಗೆ ಝೂಂ ಹಾಗೂ ಜಿಲ್ಲೆಯ ಯ್ಯೂಟೂಬ್ ಚಾನೆಲ್ ಮೂಲಕ ನಡೆಯಲಿದೆ.
ಸಯ್ಯಿದ್ ಜ’ಅ್ ಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ದುಆ ದೊಂದಿಗೆ ಚಾಲನೆ ನೀಡಲಿದ್ದಾರೆ. ಉಡುಪಿ ಜಿಲ್ಲಾ ಸಂಯುಕ್ತ ಜಮಾತ್ ಸಹಾಯಕ ಖಾಝಿ ಅಬ್ದುರ್ರಹ್ಮಾನ್ ಮದನಿ ಮೂಳೂರು ರವರು ಉದ್ಘಾಟಿಸುವರು. “ದ’ಅವಾ ಸಂಘಟನೆಯಲ್ಲಿ ಸಕ್ರೀಯತೆ” ಎಂಬ ವಿಷಯದಲ್ಲಿ ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಮುಸ್ತಫ ನ ಈಮಿ ಹಾವೇರಿ ತರಭೇತಿ ನೀಡಲಿದ್ದಾರೆ. ಸಮಾರೋಪದಲ್ಲಿ ಅಸ್ಸಯ್ಯಿದ್ ರಾಶಿದ್ ಬುಖಾರಿ ತಂಙಳ್ ಮಲಪ್ಪುರ ದುಆಗೈಯ್ಯಲಿದ್ದಾರೆ. ಎಸ್ಸೆಸ್ಸೆಫ್ ರಾಜ್ಯ ಪ್ರ.ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಹಾಗೂ ರಾಜ್ಯ ವಿಸ್ಡಂ ಕಾರ್ಯದರ್ಶಿ ಎನ್.ಸಿ ರಹೀಂ ಕಾರ್ಕಳ ಆಶಂಸಿಸಲಿದ್ದಾರೆ. ಮುನ್ನುಡಿ ಬಾಷನವನ್ನು ಜಿಲ್ಲಾ ಪ್ರಮಕಾರ್ಯದರ್ಶಿ ಇಬ್ರಾಹಿಂ ಮಜೂರು ಮಾಡಲಿರುವರು. ಜಿಲ್ಲಾ ದ’ಅವಾ ಕಾರ್ಯದರ್ಶಿ ಸ್ವಾಗತಿಸುವರು, ಕ್ಯಾಂಪಸ್ ಕಾರ್ಯದರ್ಶಿ ಶಾಹುಲ್ ನ’ಈಮಿ ವಂದಿಸುವರು. ಜಿಲ್ಲಾ ರಾಜ್ಯ ಕ್ಯಾಂಪಸ್ ಸಿಂಡಿಕೇಟ್ ಸದಸ್ಯ ಮುಹಮ್ಮದ್ ರಕೀಬ್ ಕನ್ನಂಗಾರ್ ನಿರೂಪಿಸಲಿದ್ದಾರೆ. ಎಂದು SSF ಜಿಲ್ಲಾ ದಅವಾ ಕಾರ್ಯದರ್ಶಿ ಮಜೀದ್ ಹನೀಫಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.