ಮರಿಕ್ಕಳ: ಪ್ರಸ್ತುತ ಕೊರೋನ ಮಹಾಮಾರಿ ಹರಡಿ ಲಾಕ್ ಡೌನ್ ನಿಂದಾಗಿ ಮಸೀದಿ ಮದ್ರಸಗಳು ಮುಚ್ಚಲ್ಪಟ್ಟು ಹೆಚ್ಚಿನ ಕಡೆ ಖತೀಬರು, ಉಸ್ತಾದರು ಸಂಬಳ ಕಡಿತ, ವಿಳಂಬಗಳಿಂದ ನಲುಗಿರುವಾಗ ಮರಿಕ್ಕಳ ಜುಮಾ ಮಸ್ಜಿದ್ ನ ಎಲ್ಲಾ ಉಸ್ತಾದರುಗಳಿಗೂ ಪವಿತ್ರ ರಂಝಾನ್ ತಿಂಗಳ ರಜೆ ಸಂಬಳ ಕೊಡುವುದರೊಂದಿಗೆ ಖತೀಬ್ ಹಾಗೂ ಮುಅಝಿನ್ ಉಸ್ತಾದರಿಗೆ ತರಾವೀಹಿನ ಸಂಪೂರ್ಣ ಮೊಬಲಗು ಕೊಡುವುದು ಮಾತ್ರವಲ್ಲದೆ, ಇತರ ಸದರ್ ಹಾಗೂ ಸಹ ಅಧ್ಯಾಪಕರುಗಳಿಗೆ ಒಂದು ತಿಂಗಳ ಸಂಬಳ ಎಕ್ಸ್ಟ್ರಾ ಬೋನಸ್ ಆಗಿ ಕೊಡುವುದರೊಂದಿಗೆ ವರ್ಷಕ್ಕೆ 13 ತಿಂಗಳುಗಳ ವೇತನ ನೀಡುವ ಅಭಿನಂದನಾರ್ಹ ತೀರ್ಮಾನ ಕೈಗೊಳ್ಳುವ ಮೂಲಕ ಇಡೀ ನಾಡಿಗೇ ಮಾದರೀ ಯೋಗ್ಯರಾಗಿರುತ್ತಾರೆ.
ಜಮಾಅತಿನ ಉಸ್ತಾದರುಗಳ ಸಂಕಷ್ಟಕ್ಕೆ ಆಸರೆಯಾಗುವ ಪ್ರಶಂಸನೀಯ ನಿರ್ಣಯ ಕೈಗೊಂಡ ಜಮಾಅತಿನ ಅಧ್ಯಕ್ಷರಾದ ಜನಾಬ್ ಅಬ್ಬಾಸ್ ಕೊಡಂಚಿಲ್, ಆಡಳಿತ ಮಂಡಳಿ ಹಾಗೂ ಜಮಾಅತಿನ ಎಲ್ಲರಿಗೂ ಅಭಿನಂದನೆಯ ಮಹಾ ಪೂರವೇ ಹರಿದು ಬರುತ್ತಿದೆ.
ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ
(ಪ್ರಧಾನ ಕಾರ್ಯದರ್ಶಿ,ಮರಿಕ್ಕಳ ಜುಮಾ ಮಸ್ಜಿದ್)