janadhvani

Kannada Online News Paper

ಸರ್ಕಾರದ ಸರ್ವ ಕ್ರಮಗಳು ವಿಫಲ: ಮುಖ್ಯಮಂತ್ರಿ ರಾಜೀನಾಮೆ ನೀಡಲಿ- ಕೆ.ಅಶ್ರಫ್

ಮಂಗಳೂರು: ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಕೊರೋನಾ ಸೋಂಕು ಹರಡುವಿಕೆ ಶರವೇಗವನ್ನು ಪಡೆದುಕೊಂಡಿದೆ.‌ ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿದ್ದಾರೆ‌.‌ ದೈನಂದಿನ ಪ್ರಕರಣಗಳು 4 ಲಕ್ಷ ದಾಟಿ, ವಿಶ್ವದಲ್ಲೇ ಹೆಚ್ಚು ಪ್ರಕರಣವು ಭಾರತದಲ್ಲಿ ದಾಖಲಾಗಿದೆ.

ಅದೇ ರೀತಿ, ರಾಜ್ಯದಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಸೂಕ್ತ ಮುಂಜಾಗ್ರತೆ ಕ್ರಮಕ್ಕೆ ವಿಫಲ, ಬೆಂಗಳೂರು ಮಹಾನಗರದಲ್ಲಿ ಆರೋಗ್ಯ ಸ್ಥಿತಿ ಪಾಲನೆ ವಿಫಲ, ವೈದ್ಯಕೀಯ ಸಂಸ್ಥೆಗಳ ಅವ್ಯವಸ್ಥೆ, ದುರಾಡಳಿತ, ಚಾಮರಾಜ ನಗರದ ಆಸ್ಪತ್ರೆಯಲ್ಲಿ ಆಕ್ಸಿಜನ್ ಪೂರೈಕೆ ಕೊರತೆಯಿಂದಾಗಿ ಇಂದು ಸುಮಾರು 20 ಕ್ಕು ಅಧಿಕ ರೋಗಿಗಳ ಮೃತ್ಯು ಹೊಣೆ ಹೊತ್ತು ಮುಖ್ಯ ಮಂತ್ರಿ ಯಡಿಯೂರಪ್ಪ ರವರು ತಕ್ಷಣ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡ ಬೇಕು ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಇದರ ಅಧ್ಯಕ್ಷರಾದ ಕೆ.ಅಶ್ರಫ್(ಮಾಜಿ ಮೇಯರ್) ಆಗ್ರಹಿಸಿದ್ದಾರೆ.

ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ‌ ಹೆಚ್ಚಾಗಿದ್ದು ದೇಶದಲ್ಲಿ ಇದೀಗ ದಿನ ಒಂದರಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನ‌ ಸಾವನ್ನಪ್ಪುತ್ತಿದ್ದಾರೆ. ಭಾನುವಾರ 3,417 ಜನರು ಬಲಿ ಆಗಿದ್ದು ಈವರೆಗೆ ಮಹಾಮಾರಿ ಕೊರೋನಾಗೆ ಬಲಿ ಆದವರ ಸಂಖ್ಯೆ 2,18,959ಕ್ಕೆ ಏರಿಕೆ ಆಗಿದೆ.

error: Content is protected !! Not allowed copy content from janadhvani.com