ಬದ್ಯಾರ್, ಬೆಳ್ತಂಗಡಿ: ಸಮಸ್ತ ಕೇರಳ ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಅಧೀನದಲ್ಲಿರುವ (ರಿ-4487) ಸಿರಾಜುಲ್ ಇಸ್ಲಾಂ ಮದರಸ ಬದ್ಯಾರ್ ನಲ್ಲಿ ನಡೆದ ಪ್ರಸಕ್ತ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಐದು ಹಾಗೂ ಏಳನೇ ತರಗತಿಯ ವಿದ್ಯಾರ್ಥಿಗಳು 100% ಶೇಕಡಾ ಫಲಿತಾಂಶಗಳನ್ನು ಪಡೆಯುವ ಮೂಲಕ ಊರಿಗೆ ಮಾದರಿಯಾಗಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಸಿರಾಜುಲ್ ಇಸ್ಲಾಂ ಮದರಸ ಬದ್ಯಾರಿನ ಅದ್ಯಾಪಕರು, ನಮ್ಮ ಎಲ್ಲಾ ವಿದ್ಯಾರ್ಥಿಗಳು ಮದರಸಾ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು ನಮಗೆ ಹೆಮ್ಮೆಯ ವಿಚಾರವಾಗಿದೆ. ಇದರ ಹಿಂದೆ ಊರಿನವರ ಪರಿಶ್ರಮ ಹಾಗೂ ಪ್ರತ್ಯೇಕವಾಗಿ ನಮ್ಮ ಮಕ್ಕಳ ಪೋಷಕರ ಸಹಕಾರದೊಂದಿಗೆ ಈ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗಿದೆ ಎಂದು ಹೇಳಿದರು.
ಬದ್ಯಾರ್ ಜಮಾ’ಅತ್ ಅಧ್ಯಕ್ಷರಾದ AM ಅಬೂಬಕರ್ ಹಾಗೂ ಆಡಳಿತ ಮಂಡಳಿಯ ಸದಸ್ಯರು.. ಊರಿನ ಮದರಸಾ ಮಕ್ಕಳು ಹಾಗೂ ನಮ್ಮ ಮಕ್ಕಳಿಗೆ ಹೆಚ್ಚಿನ ಮುತುವರ್ಜಿಯಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಶಿಕ್ಷಣ ನೀಡಿದ ಅಧ್ಯಾಪಕರನ್ನು ಶ್ಲಾಘಿಸಿದ್ದು, ತಮ್ಮ ಪ್ರಯತ್ನಕ್ಕೆ ಈ ಮೂಲಕ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ವರದಿ:
✍🏻ಆಸಿಫ್ ಬದ್ಯಾರ್,