ವಿಜಯಪುರ:ಬಿಜಾಪುರ ಸಮೇತವಿರುವ ಕರ್ನಾಟಕದ ಮುಸಲ್ಮಾನರ ಗತಕಾಲದ ಚರಿತ್ರೆಯು ಶ್ಲಾಘನೀಯ ಮತ್ತು ಐತಿಹಾಸಿಕವಾದುದು, ಮುಸ್ಲಿಮರ ಪ್ರಗತಿಪರ ಇತಿಹಾಸವು ಆಧುನಿಕ ಮುಸ್ಲಿಂ ಕನ್ನಡಿಗರಿಗೆ ಮಾದರಿಯಾಗಬೇಕು.

ಚಾರಿತ್ರಿಕ ಭೂಮಿಯಾಗಿದ್ದ ಬಿಜಾಪುರ ಮುಸಲ್ಮಾನರರ ಇಂದಿನ ಅಧೋಗತಿಗೆ ಹೊಲಸು ರಾಜಕೀಯ ಕಾರಣ ಎಂದು ಜಪಿಸುವುದಕ್ಕಿಂತ, ಇತಿಹಾಸದಿಂದ ಪಾಠ ಕಲಿತು ಹೊಸ ತಲೆಮಾರನ್ನು ಶಿಕ್ಷಣ ಕ್ರಾಂತಿಯ ಮೂಲಕ ಅಭಿವೃದ್ಧಿಯತ್ತ ಕೊಂಡೊಯ್ಯಬೇಕೆಂದು ಇಹ್ಸಾನ್ ಕರ್ನಾಟಕ ಚೇರ್ಮೇನ್ ಹಾಗೂ ರಾಜ್ಯ ವಕ್ಫ್ ಮಂಡಳಿ ಸದಸ್ಯರಾದ ಮೌಲಾನಾ ಶಾಫೀ ಸಅದಿ ಹೇಳಿದರು.
ಅವರು ಇಂದು ಬಿಜಾಪುರದ ಮಸ್ಜಿದೇ ಅಲಿಬಾವಿ ಜುಮಾ ಭಾಷಣದಲ್ಲಿ ಮಾತನಾಡಿದರು.
ಬಿಜಾಪುರವಿಡೀ ಜಗತ್ತಿನ ಗಮನ ಸೆಳೆಯುವಂತ ಸ್ಮಾರಕಗಳ ನಾಡು, ಆದರೆ ಮುಸಲ್ಮಾನರು ತೀರಾ ಹಿಂದುಳಿದ ವಿಭಾಗವಾಗಿ ಜೀವಿಸಲು ನಾವೆಲ್ಲರೂ ಕೂಡ ಕಾರಣಕರ್ತರು, ಇತಿಹಾಸದಿಂದ ಪಾಠ ಕಲಿತು ಮುಂದುವರಿಯಿರಿ, ಶಿಕ್ಷಣ ಕ್ರಾಂತಿ ಮತ್ತು ಸಹೋದರ ಧರ್ಮೀಯರೊಂದಿಗೆ ಸಹಬಾಳ್ವೆಯಿಂದ ಮುಂದುವರಿಯಿರಿ ಎಂದು ಸಲಹೆ ನೀಡಿದರು.