janadhvani

Kannada Online News Paper

ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಶನ್ (KSWA) ಸೌದಿ ರಾಷ್ಟ್ರೀಯ ಸಮಿತಿ ಮತ್ತು ಅನ್ವಾರುಲ್ ಹುದಾ ಸೆಂಟರ್ ವಿರಾಜಪೇಟೆ ಇದರ ಜಂಟಿ ಆಶ್ರಯದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ ಅನ್ವಾರುಲ್ ಹುದಾ ಸೆಂಟರ್ ನಲ್ಲಿ ನಡೆಯಿತು

ವೈದ್ಯಕೀಯ ಶಿಬಿರಕ್ಕೆ ಇಂಡೋ ಸೌದಿ Diplomatic Medical ಕಾರ್ಯದರ್ಶಿಯೂ KSWA ಮಕ್ಕತುಲ್ ಮುಕರ್ರಮಃ ಝೋನ್ ಅಧ್ಯಕ್ಷರೂ ಆದ ಡಾ:ಫಹೀಂ ರಹ್ಮಾನ್ ನೇತೃತ್ವ ವಹಿಸಿದರು..

ನಂತರ ನಡೆದ ಸಮಾರೋಪ ಸಮಾರಂಭ ಕೊಡಗು ಜಿಲ್ಲಾ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ KSWA ಸೌದಿ ರಾಷ್ಟ್ರೀಯ ಸಮಿತಿ ಚೆಯರ್ಮ್ಯಾನ್ ಸ್ಸಯ್ಯದ್ ಅಬ್ದುಲ್ ಖಾದಿರ್ ಅಲ್ ಬುಖಾರಿ ಉದ್ಘಾಟಿಸಿದರು,.

ಅಲಿ ಮುಸ್ಲಿಯಾರ್ ಬಹ್ರೈನ್ (ಅಧ್ಯಕ್ಷರು KSWA GCC ಸಮಿತಿ) ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ (ಮ್ಯಾನೇಜರ್ ಮರ್ಕಝುಲ್ ಹಿದಾಯ ಕೊಟ್ಟಮುಡಿ) ಹಫೀಳ್ ಸಅದಿ ಕೊಳಕ್ಕೇರಿ (ಕೋರ್ಡಿನೇಟರ್ KSWA ಸೌದಿ ರಾಷ್ಟ್ರೀಯ ಸಮಿತಿ) ಶಾಫಿ ಸಅದಿ ಸೋಮವಾರಪೇಟೆ (ಅಧ್ಯಕ್ಷರು SSF ಕೊಡಗು ಜಿಲ್ಲಾ ಸಮಿತಿ)
ಅಬ್ಬಾಸ್ ಸಖಾಫಿ ಬಲಮುರಿ (ಅಧ್ಯಕ್ಷರು KSWA ಖತ್ತರ್ ರಾಷ್ಟ್ರೀಯ ಸಮಿತಿ) ಮುಂತಾದವರು ಶುಭಹಾರೈಕೆ ಭಾಷಣ ಮಾಡಿದರು..

ನಂತರ ಡಾ:ಫಹೀಂ ರಹ್ಮಾನ್ ಮತ್ತು ಜುನೈದ್ ಅನ್ವಾರಿ ಅಲ್-ಅಹ್ಸನಿ ರವರನ್ನು ಸನ್ಮಾನಿಸಿದರು..

ಕರ್ನಾಟಕ ರಾಜ್ಯ
ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ
ಶೈಖುನಾ ಮಹಮೂದ್ ಉಸ್ತಾದ್ ಪ್ರಾರ್ಥನೆಗೆ ನೇತೃತ್ವ ವಹಿಸಿದರು

KSWA GCC ಪ್ರಧಾನ ಕಾರ್ಯದರ್ಶಿ ಆಬಿದ್ ಕಂಡಕ್ಕರೆ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿ.. ಸಕೀರ್ ಮಾಸ್ಟರ್ ಪೊನ್ನತ್ತ್ ಮೊಟ್ಪೆ ವಂದಿಸಿದರು