ಮಂಗಳೂರು: ಸಕಲೇಶಪುರ ತಾಲೂಕಿನ ಸುಂಡಕೆರೆ ಗ್ರಾಮದ ಮೌಲ್ವಿ ಅಬ್ದುಲ್ ನಾಸಿರ್ ದಾರಿಮಿ ಮೇಲೆ ಇಂದು ಖಾಸಗಿ ವಾಹನದಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು,ಅವಾಚ್ಯ ಶಬ್ದಗಳಿಂದ ಬೈದು ದೈಹಿಕ ಹಲ್ಲೆ ನಡೆಸಿರುತ್ತಾರೆ.
ಈ ಕೃತ್ಯವು ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುವ ಹಾಗೂ ಅಶಾಂತಿಯನ್ನು ಕದಡುವ ಮುಂದುವರಿದ ಭಾಗವಾಗಿದೆ. ದುಷ್ಕರ್ಮಿಗಳ ಈ ಕೃತ್ಯವನ್ನು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ತೀವ್ರವಾಗಿ ಖಂಡಿಸುವುದಲ್ಲದೆ, ಕೂಡಲೆ ದುಷ್ಕರ್ಮಿಗಳನ್ನು ಪೊಲೀಸು ಇಲಾಖೆ ಬಂಧಿಸಬೇಕು ಎಂದು ಆಗ್ರಹಿಸುತ್ತದೆ.
ಕೆ.ಅಶ್ರಫ್(ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.