✍️ ಮುಹಮ್ಮದ್ ಉಳ್ಳಾಲ್
ಕೇರಳ ಮಾಧ್ಯಮದಲ್ಲಿ ಚರ್ಚೆಯಾಗುತ್ತಿರುವ
ಬಿಸಿ ಬಿಸಿ ಸುದ್ಧಿ ಏನೆಂದರೆ ಪಿಣರಾಯಿ ವಿಜಯನ್ ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತಾರೋ… ಕೇರಳ LDF ಪಾಲಾಗಲಿದೆಯೇ…?
ಹೌದು ಎನ್ನುತ್ತಿದೆ ಇಲ್ಲಿಯ ಬಹು ಸಂಖ್ಯೆಯ ಮತದಾರರು. ಆ ಲಕ್ಷಣಗಳು ಕಾಣುತ್ತಿವೆ. ಕೇರಳದಾದ್ಯಂತ ಕೆಂಬಾವುಟ ರಾರಾಜಿಸುತ್ತಿವೆ.. ಪಿಣರಾಯಿ ವಿಜಯನ್ ಗೆ ವಿಶ್ವಾಸ ತುಂಬುವ ಕೆಲಸದಲ್ಲಿ ಅಲ್ಲಿಯ ಮಂದಿ ತೊಡಗಿಸಿಕೊಂಡಿದೆ.
ಇವೆಲ್ಲದರ ಮದ್ಯೆ ವಿರೋಧಿ ಪಾಳಯಕ್ಕೆ ನಡುಕ ಶುರುವಾಗಿ ಬಿಟ್ಟಿದೆ. ಜನತೆಗೆ ಸತ್ಯ ಗೊತ್ತಾಗಿದೆ.ಸುಳ್ಳು ಕೇಸ್ ಹಾಕಿ ಪಿಣರಾಯಿ ವಿಜಯನ್ ರನ್ನು ಜೈಲಿಗಟ್ಟುವ ಕನಸು ಕಂಡಿದ್ದವರಿಗೆ ಈಗ ಭಯವಾಗುತ್ತಿದೆ.
ED ಅಧಿಕಾರಿಗಳನ್ನು ಬಳಸಿ ಕೊಂಡು ಸ್ವಪ್ನ ಸುರೇಶ್ ಎಂಬ ಆರೋಪಿಯೊಂದಿಗೆ ಚಿನ್ನ ಕಳ್ಳ ಸಾಗಾಣಿಕೆಯ ಕೇಸಲ್ಲಿ ಕೇರಳ ಮುಖ್ಯಮಂತ್ರಿಯ ಹೆಸರನ್ನು ಉಲ್ಲೇಖಿಸುವಂತೆ ED ಅಧಿಕಾರಿಗಳು ಒತ್ತಾಯ ಪಡಿಸುವ ಸ್ಪೋಟಕ ಮಾಹಿತಿಗಳು ಒಂದೊಂದಾಗಿ ಹೊರ ಬೀಳುತ್ತಿದೆ.
ED ಅಧಿಕಾರಿಗಳನ್ನು ಬಳಸಿಕೊಂಡು ನಡೆಸಿದ ಕರ್ಮ ಕಾಂಡದ ಸುದ್ಧಿಗಳು ಟಿವಿ ಮಾಧ್ಯಮದಲ್ಲಿ ಡಿಬೇಟ್ ಆಗುತ್ತಿದೆ. ವಿರೋಧಿ ಪಾಳಯಕ್ಕೆ ಇದೆಲ್ಲಾ ಬೇಡವಾಗಿತ್ತು… ಪಿಣರಾಯಿ ವಿಜಯನ್ ರೊಂದಿಗೆ ಸೆಣಸಾಟ..ಕೇರಳ ಮತ್ತೊಮ್ಮೆ LDF ನೊಂದಿಗಿದೆ.