janadhvani

Kannada Online News Paper

ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾರ್ಯಕ್ರಮ: ಯಶಸ್ಸು ಸುನ್ನೀ ಕಾರ್ಯಕರ್ತನ ಕರ್ತವ್ಯ- ಎಸ್ಸೆಸ್ಸೆಫ್ ಉಡುಪಿ

ಕಾರ್ಕಳ, ಮಾರ್ಚ್ 14; ಉಡುಪಿ ಜಿಲ್ಲೆಯ ಕಾರ್ಕಳ ಡಿವಿಷನ್ ವ್ಯಾಪ್ತಿಯ ಬಂಗ್ಲೆಗುಡ್ಡೆ ತ್ವೈಬಾ ಗಾರ್ಡನ್ ಸಂಸ್ಥೆಯ ಸ್ವಲಾತ್ ವಾರ್ಷಿಕ, ಮಹಿಳಾ ಸನದುದಾನ ಸಮ್ಮೇಳನ ಮಾರ್ಚ್ 14 ಆದಿತ್ಯವಾರ ಸಾಯಂಸಂಜೆ ನಡೆಯಲಿದೆ.

ಈ ಒಂದು ಕಾರ್ಯಕ್ರಮದಲ್ಲಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ “ಶೈಖುನಾ ಎ.ಪಿ. ಉಸ್ತಾದ್”, ಸಯ್ಯಿದ್ ಸಾದಾತ್ ತಂಙಳ್, ನೌಫಲ್ ಸಖಾಫಿ ಕಳಸ ಇನ್ನಿತರ ಉಲಮಾ ಉಮಾರಾ, ಶೈಕ್ಷಣಿಕ, ಸಾಮಾಜಿಕ, ಸಂಘ ಸಂಸ್ಥೆ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಆದ್ದರಿಂದ ಈ ಒಂದು ಮಹತ್ತರವಾದ ಪುಣ್ಯ ಮಜ್ಲಿಸ್ ಪ್ರಚಾರಪಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸಹಕರಿಸಿ ಯಶಸ್ವಿಗೊಳಿಸಲು ಎಸ್ಸೆಸ್ಸೆಫ್ ಉಡುಪಿ ಜಿಲ್ಲಾಧ್ಯಕ್ಷ ಅಹ್ಮದ್ ಶಬೀರ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಎಂ.ಕೆ. ಇಬ್ರಾಹಿಂ ಮಜೂರು, ಕೋಶಾಧಿಕಾರಿ ಅಲ್ತಾಫ್ ಕಾರ್ಕಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತದೆ ಎಂದು ಜಿಲ್ಲಾ ಮೀಡಿಯಾ ಸೆಲ್ ತಿಳಿಸಿದೆ.

_🌀 *SSFudupidist@gmail.com*_