janadhvani

Kannada Online News Paper

ಸೌದಿ ಅರೇಬಿಯಾಕ್ಕೆ ಅಪ್ಪಳಿಸಿದ ಹೌತಿ ಕ್ಷಿಪಣಿ: 5 ಜನರಿಗೆ ಗಾಯ

ಯಮನ್ ಹೌತಿ ಮಿಲಿಷಿಯ ಉಡಾವಣೆ ಮಾಡಿದ ಕ್ಷಿಪಣಿ ಇಂದು ಬೆಳಿಗ್ಗೆ ಸೌದಿ ಅರೇಬಿಯಾದ ಜಿಝಾನ್ ವಲಯಕ್ಕೆ ಅಪ್ಪಳಿಸಿದೆ.

ಕ್ಷಿಪಣಿಯ ಚೂರುಗಳಿಂದಾಗಿ ಮೂವರು ಸೌದಿ ಹಾಗೂ ಇಬ್ಬರು ಯಮನ್ ನಾಗರಿಕರು ಗಾಯಗೊಂಡಿದ್ದಾರೆ ಎಂದು ಸೌದಿ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಎರಡು ಮನೆಗಳು ಒಂದು ಅಂಗಡಿ ಹಾಗೂ ಮೂರು ಕಾರುಗಳು ಹಾನಿಯಾಗಿದೆ ಎಂದು ನಾಗರಿಕ ರಕ್ಷಣಾ ನಿರ್ದೇಶನಾಲಯದ ಮಾಧ್ಯಮ ವಕ್ತಾರ ಕರ್ನಲ್ ಮೊಹಮ್ಮದ್ ಬಿನ್ ಯಾಹ್ಯಾ ರವರು ಸೌದಿ ಅರೇಬಿಯಾದ ಮಾಧ್ಯಮಕ್ಕೆ ತಿಳಿಸಿರುವುದಾಗಿ ವರದಿಯಾಗಿದೆ.