ಮಾಸ್ಕೋ, ಫೆ 08: ಕೊರೋನಾ ವೈರಸ್ ಸೋಂಕಿಗೆ ಒಳಗಾದ ರೋಗಿಗಳಿಗೆ ಕ್ಷಯರೋಗ ಬರುವ ಸಾಧ್ಯತೆ ಹೆಚ್ಚು ಎಂದು ರಷ್ಯಾದ ಆರೋಗ್ಯ ಸಚಿವಾಲಯ ಎಚ್ಚರಿಸಿದೆ.
“ಕೋವಿಡ್ -19 ನಿಂದ ಬಳಲಿದ ನಂತರ ಅನೇಕ ರೋಗಿಗಳು ಶ್ವಾಸಕೋಶದಲ್ಲಿ ಫೈಬ್ರೋಸಿಸ್ ರೂಪದಲ್ಲಿ ಉಳಿದಿರುವ ಬದಲಾವಣೆಗಳು ಅಭಿವೃದ್ಧಿಯಾಗುತ್ತದೆ. ಈ ವರ್ಗದ ರೋಗಿಗಳಲ್ಲಿ ಮುಂದೆ ಕ್ಷಯರೋಗ ಕಾಡುವ ಅಪಾಯವಿದೆ. ಕೊರೋನಾ ಸೋಂಕಿರುವಾಗ ಹಾಗೂ ಕೊರೋನಾ ನಿವಾರಣೆಯ ನಂತರವೂ ಕ್ಷಯ ರೋಗ ಸಂಭವಿಸಬಹುದಾಗಿದೆ” ಎಂದು ಎಚ್ಚರಿಸಿದೆ.
ಶಂಕಿತ ಕೊರೋನಾ ವೈರಸ್ ರೋಗಿಗಳು ಕ್ಷಯ ರೋಗ ತಪಾಸಣೆಗೆ ಒಳಪಡುವಂತೆ ಸಚಿವಾಲಯವು ಶಿಫಾರಸು ಮಾಡಿದೆ. ಈ ರೋಗವು ಸುಪ್ತ ರೂಪದಲ್ಲಿಯೂ ಸಹ ಕೋವಿಡ್ ನ ತೀವ್ರ ಸ್ವರೂಪಗಳಿಗೆ ಕಾರಣವಾಗುತ್ತದೆ. ಅಲ್ಲದೆ ಕ್ಯಾನ್ಸರ್ ರೋಗಿಗಳು ಕೋವಿಡ್ 19 ನ ತೀವ್ರ ಸ್ವರೂಪಗಳನ್ನು ಅಭಿವೃದ್ಧಿಪಡಿಸುವ ಹೆಚ್ಚಿನ ಅಪಾಯವನ್ನು ಹೊಂದಿದ್ದು, ಸಾಧ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಕ್ಯಾನ್ಸರ್ ರೋಗಿಗಳಿಗೆ ವಿಶೇಷ ಕೊರೋನಾ ವೈರಸ್ ಚಿಕಿತ್ಸೆ ಇಲ್ಲ ಎಂದು ಸಚಿವಾಲಯ ತಿಳಿಸಿದೆ.