janadhvani

Kannada Online News Paper

ಚುನಾವಣಾ ಗುರುತಿನ ಚೀಟಿ: ಡಿಜಿಟಲ್ ಆವೃತಿ ನಾಳೆಯಿಂದ ಲಭ್ಯ

ನವದೆಹಲಿ: ಚುನಾವಣಾ ಗುರುತಿನ ಚೀಟಿಯ (Voter Id) ಡಿಜಿಟಲ್ ಆವೃತಿ ಸೋಮವಾರ ಅಂದರೆ ಜನವರಿ 25ರಿಂದ ಲಭ್ಯವಾಗಲಿದೆ. ಇದಕ್ಕಾಗಿ ಚುನಾವಣಾ ಆಯೋಗವು (Election Commission) e-EPIC ಆ್ಯಪನ್ನು ಬಿಡುಗಡೆ ಮಾಡಲಿದೆ. ಈ ಆ್ಯಪ್ ನ ಸಹಾಯದಿಂದ ಆಧಾರ್ ಕಾರ್ಡ್ ನಂತೆಯೇ ವೋಟರ್ ಐಡಿಯನ್ನುಕೂಡಾ ಆನ್ ಲೈನ್ ನಲ್ಲಿ ಪಡೆಯಬಹುದಾಗಿದೆ.

ಈ ಅಪ್ಲಿಕೇಶನ್ ಅನ್ನು ಎರಡು ಹಂತಗಳಲ್ಲಿ ಪ್ರಾರಂಭಿಸಲಾಗುವುದು. ಮೊದಲ ಹಂತ ಜನವರಿ 25 ರಿಂದ ಜನವರಿ 31 ರವರೆಗೆ ನಡೆಯಲಿದೆ. ಈ ವೇಳೆ 19 ಸಾವಿರ ಹೊಸ ಮತದಾರರಿಗೆ ಈ ಸೌಲಭ್ಯ ಲಾಭ ಪಡೆಯಲು ಅನುವು ಮಾಡಿಕೊಡಲಾಗಿದೆ. ಎರಡನೇ ಹಂತ ಫೆಬ್ರವರಿ 1 ರಿಂದ ಪ್ರಾರಂಭವಾಗಲಿದ್ದು, ಇದರಲ್ಲಿ ಎಲ್ಲಾ ಮತದಾರರು ಈ ಸೌಲಭ್ಯದ ಲಾಭ ಪಡೆಯಬಹುದಾಗಿದೆ.

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸುವಾಗ ಮೊಬೈಲ್ (Mobile) ಸಂಖ್ಯೆಯನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ. ಮತದಾರರ ಪಟ್ಟಿಯಲ್ಲಿ(Voter List) ಮೊಬೈಲ್ ಸಂಖ್ಯೆ ಮತ್ತು ಹೆಸರನ್ನು ನಮೂದಿಸಿದ ನಂತರ, ಫೋನ್‌ (Phone) ಮೂಲಕ ಸಂದೇಶವನ್ನು ರವಾನಿಸಲಾಗುತ್ತದೆ. ನಂತರ ಸಿಗುವ ಒಟಿಪಿಯನ್ನುಬಳಸಿ e-EPIC ಆ್ಯಪನ್ನು ಡೌನ್ ಲೋಡ್ ಮಾಡಲು ಸಾಧ್ಯವಾಗುತ್ತದೆ.

ಹಳೆಯ ಮತದಾರರು ಕೆವೈಸಿ ಪಡೆಯಬೇಕಾಗುತ್ತದೆ:
ಈಗಾಗಲೇ ವೋಟರ್ ಐಡಿ (Voter ID) ಹೊಂದಿರುವವರು, ಡಿಜಿಟಲ್ ಕಾರ್ಡ್ ಗಾಗಿ ಡಿಜಿಟಲ್ ವೇರಿಫಿಕೆಶನ್ ಮಾಡಿಸಿಕೊಳ್ಳಬೇಕಾಗುತ್ತದೆ. ಇದು ಬ್ಯಾಂಕಿನ (Bank) ಕೆವೈಸಿ ಪ್ರಕ್ರಿಯೆಯನ್ನು ಹೋಲುತ್ತದೆ. ಇಲ್ಲಿಯೂ, ಮತದಾರ ತನ್ನಮೊಬೈಲ್ ನಂಬರ್ ಮತ್ತು ಇಮೇಲ್ ಐಡಿಯನ್ನುನೀಡಬೇಕು. ಈ ಪೋನ್ ನಂಬರ್ ಮತ್ತು ಇಮೇಲ್ ಐಡಿ ಮೂಲಕವೇ ಮಾಹಿತಿಯನ್ನು ನೀಡಲಾಗುತ್ತದೆ.

ಡಿಜಿಟಲ್ ಕಾರ್ಡ್ ನಿಂದ ಆಗುವ ಲಾಭ :
ಇನ್ನು ವೋಟರ್ ಐಡಿ ಪಡೆಯಲು ಬಹಳ ಸಮಯದವರೆಗೆ ಕಾಯುವ ಅಗತ್ಯವಿರುವುದಿಲ್ಲ. ಹೊಸ ಗುರುತಿನ ಚೀಟಿ ಪಡೆಯಲು ಅಥವಾ ಗುರುತಿನ ಚೀಟಿಯನ್ನು ಬದಲಾಯಿಸಲು ಕಚೇರಿಗಳಿಗೆ ಸುತ್ತುವ ಅಗತ್ಯವೂ ಇಲ್ಲ. ಪೋನಿನಲ್ಲಿಯೇ e-EPIC ಆ್ಯಪನ್ನು ಡೌನ್ ಲೋಡ್ ಮಾಡಿಕೊಂಡು, ಡಿಜಿಟಲ್ ವೋಟರ್ ಐಡಿ ಕಾರ್ಡನ್ನು ಪಡೆಯಬಹುದಾಗಿದೆ. ಒಂದು ವೇಳೆ ವೋಟರ್ ಐಡಿ ಕಳೆದು ಹೋದಲ್ಲಿ 25 ರೂಪಾಯಿಯನ್ನು ಪಾವತಿಸಿ ಕಾರ್ಡಿನ ನಕಲು ಪ್ರತಿಯನ್ನು ಪಡೆದುಕೊಳ್ಳಬಹುದಾಗಿದೆ.

error: Content is protected !! Not allowed copy content from janadhvani.com