janadhvani

Kannada Online News Paper

ಝಂಝಂ ಲೇಬಲಿನಲ್ಲಿ ಸಾದಾ ನೀರು ವಿತರಣೆ – ವಿದೇಶೀಯರ ಬಂಧನ

ರಿಯಾದ್: ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಝಂಝಂ ವಾಟರ್ ಹೆಸರಿನಲ್ಲಿ ಸಾದಾ ನೀರನ್ನು ಮಾರಾಟ ಮಾಡುತ್ತಿದ್ದ ವಿದೇಶಿಯರನ್ನು ಬಂಧಿಸಲಾಗಿದೆ. ವಂಚನೆ ಬಗ್ಗೆ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ರಿಯಾದ್ ಪುರಸಭೆ ತಪಾಸಣೆ ನಡೆಸಿ,ಈ ಘಟಕವನ್ನು ತಂಡವು ಮೊಹರು ಮಾಡಿದೆ.

ಕಳೆದ ದಿನ ರಿಯಾದ್‌ನ ಕಟ್ಟಡದೊಳಗೆ ವಂಚನೆ ಘಟಕ ಪತ್ತೆಯಾಗಿದೆ. ಝಂಝಂ ಲೇಬಲ್ ನೊಂದಿಗೆ ಸಾದಾ ನೀರನ್ನು ಬಾಟಲಿಯಲ್ಲಿ ತುಂಬಿಸಿ, ಅದನ್ನು ರಸ್ತೆಬದಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ನಕಲಿ ಘಟಕವನ್ನು ವಿದೇಶಿಯರು ನಡೆಸುತ್ತಿದ್ದು, ಅವರನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ.ಬಾಟಲಿಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.ಯಾತ್ರಿಕರನ್ನು ಶೋಷಿಸಿದ ವಂಚಕರನ್ನು ಕಾನೂನು ಕ್ರಮಕ್ಕೆ ಒಪ್ಪಿಸಲಾಗಿದೆ.

ಝಂಝಮ್ ಮಕ್ಕಾದ ಪವಿತ್ರ ನೀರಾಗಿದೆ.

ಝಂಝಮ್ ಬಾವಿಯಿಂದ ನೇರವಾಗಿ ಸಂಗ್ರಹಿಸಿದ ನೀರನ್ನು ಮಕ್ಕಾದ ಸ್ಥಾವರ ಮೂಲಕ ಸರಬರಾಜು ಮಾಡಲಾಗುತ್ತದೆ.ಮಕ್ಕಾ ಮತ್ತು ಮದೀನಾದಲ್ಲಿರುವ ಎಲ್ಲರಿಗೂ ಅಗತ್ಯವಿರುವಂತೆ  ತೆಗೆದುಕೊಳ್ಳಬಹುದು.

ಮಕ್ಕಾದಿಂದ ದೂರದ ಪ್ರದೇಶಗಳ ಜನರ ಅನುಕೂಲಕ್ಕಾಗಿ 5 ಲೀಟರ್ ಝಂಝಮ್ ನೀರಿಗೆ ಕೇವಲ ಐದು ರಿಯಾಲ್ ಮಾತ್ರ ಖರ್ಚಾಗುತ್ತದೆ. ಇತ್ತೀಚೆಗೆ ಆಯ್ದ ಮಾಲ್‌ಗಳ ಮೂಲಕವೂ ಝಂಝಂ ವಿತರಿಸಲಾಗುತ್ತಿದೆ.

error: Content is protected !! Not allowed copy content from janadhvani.com