janadhvani

Kannada Online News Paper

ಇಂದು ಕಾವಳಕಟ್ಟೆ ಅಲ್ ಖಾದಿಸದಲ್ಲಿ ಯೂನಾನಿ ವೆಲ್‌ನೆಸ್ ಕ್ಯಾಂಪ್

ಕಾವಳಕಟ್ಟೆ: ಮರ್ಕಝ್ ನಾಲೆಜ್ ಸಿಟಿಯಲ್ಲಿರುವ ಇಂತಿಬಿಷ್ ವೆಲ್‌ನೆಸ್ ಸೆಂಟರ್ ಸಹಯೋಗದೊಂದಿಗೆ ಯೂನಾನಿ ವೆಲ್‌ನೆಸ್ ಕ್ಯಾಂಪ್ ಇಂದು ಮಧ್ಯಾಹ್ನ 3ಗಂಟೆಗೆ ಕಾವಳಕಟ್ಟೆ ಅಲ್ ಖಾದಿಸ ಕ್ಯಾಂಪಸ್‌ನಲ್ಲಿ ನಡೆಯಲಿದೆ.

ಸಂಸ್ಥೆಯ ಶಿಲ್ಪಿ ಮೌಲಾನಾ ಡಾ.ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಹಝ್ರತ್ ಅಧ್ಯಕ್ಷತೆ ವಹಿಸಲಿದ್ದು ಮರ್ಕಝ್ ನಾಲೆಜ್ ಸಿಟಿಯಲ್ಲಿರುವ ಇಂತಿಬಿಷ್ ವೆಲ್‌ನೆಸ್ ಸೆಂಟರ್ ಮ್ಯಾನೆಜಿಂಗ್ ಡೈರೆಕ್ಟರ್ ಡಾ. ಯುಕೆ ಮುಹಮ್ಮದ್ ಶರೀಫ್, ಇಂತಿಬಿಷ್ CFO ಅಬ್ದುಸ್ಸಲಾಂ, ಮರ್ಕಝ್ ಯೂನಾನಿ ಮೆಡಿಕಲ್ ಕಾಲೇಜಿನ ಡಾ ಸಯ್ಯಿದ್ ಸೈಫುದ್ದೀನ್, ಇಂತಿಬಿಷ್ ರಿಲೇಶನ್ ಶಿಪ್ ಮೆನೇಜರ್ ಶಾಫೀ ಮುಹಮ್ಮದ್ ಸಹಿತ ಹಲವು ಪ್ರಮುಖ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ.

ಇಂದು ಮಧ್ಯಾಹ್ನ ಮೂರರಿಂದ ಸಂಜೆ 6ರ ವರೆಗೆ ವೆಲ್‌ನೆಸ್ ಕ್ಯಾಂಪ್ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.