janadhvani

Kannada Online News Paper

ವಿಸಿಟ್ ವೀಸಾ ಉಚಿತ ವಿಸ್ತರಣೆ- ಯುಎಇಯಲ್ಲಿ ಸಿಲುಕಿರುವವರು ನಿರಾಳ

ಅಬುಧಾಬಿ: ಯುಎಇ ಸಂದರ್ಶಕ ವೀಸಾ ಅವಧಿಯನ್ನು ಉಚಿತವಾಗಿ ವಿಸ್ತರಿಸಿದ ಕ್ರಮವು ಸಾವಿರಾರು ಸಂದರ್ಶಕರಿಗೆ ನೆಮ್ಮದಿ ತಂದಿದೆ. ಭೇಟಿ ವೀಸಾ ಅವಧಿಯನ್ನು ಒಂದು ತಿಂಗಳು ಉಚಿತವಾಗಿ ವಿಸ್ತರಿಸುವ ಯುಎಇ ನಿರ್ಧಾರದಿಂದ ಭಾರತ ಸೇರಿದಂತೆ ಯುಎಇ ಯಲ್ಲಿ ಸಿಲುಕಿರುವ ಸಾವಿರಾರು ಜನರು ನಿರಾಳರಾಗಿದ್ದಾರೆ.

ಸೌದಿ ಅರೇಬಿಯಾ ಮತ್ತು ಕುವೈತ್‌ಗೆ ಪ್ರಯಾಣಿಸಲು ದುಬೈಗೆ ಆಗಮಿಸಿ, ವಿಮಾನ ರದ್ದುಗೊಂಡ ಹಿನ್ನೆಲೆಯಲ್ಲಿ ಯುಎಇ ಯಲ್ಲಿ ಸಿಲುಕಿರುವವರು ಈ ಕ್ರಮವನ್ನು ಸ್ವಾಗತಿಸಿದ್ದಾರೆ. ವಿವಿಧ ದೇಶಗಳು ತಮ್ಮ ವಿಮಾನ ನಿಲ್ದಾಣಗಳನ್ನು ಮುಚ್ಚಿದ ಕಾರಣ ಸಂದರ್ಶಕರ ವೀಸಾಗಳ ಮಾನ್ಯತೆಯನ್ನು ಒಂದು ತಿಂಗಳವರೆಗೆ ಉಚಿತವಾಗಿ ವಿಸ್ತರಿಸಲು ಯುಎಇ ನಿರ್ಧರಿಸಿದೆ.