ಎಲ್ಲರೂ ತಿಳಿದಿರುವಂತೆ ರೈತರು ಅಶಕ್ತ ಜಾನುವಾರುಗಳನ್ನು ಮಾತ್ರ ಮಾರಾಟ ಮಾಡುತ್ತಾರೆ. ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಿಂದ ರೈತರು ಏನು ಮಾಡಬೇಕು? ಇದರಿಂದ ಅವರಿಗೆ ಹೊರೆಯಾಗುವುದು ನಿಜ. ರೈತರು ತಮ್ಮ ಜಾನುವಾರುಗಳೊಂದಿಗೆ ಯಾವುದೇ ರೀತಿಯ ಭಾವನಾತ್ಮಕ ನಂಟು ಇಟ್ಟುಕೊಂಡಿರುವುದಿಲ್ಲ.
ಮೈಸೂರು: ಗೋಮಾಂಸ ರಫ್ತು ಮಾಡುವವರಲ್ಲಿ ಮೇಲ್ವರ್ಗದ ಬ್ರಾಹ್ಮಣರೇ ಹೆಚ್ಚಾಗಿದ್ದಾರೆ ಎಂದು ಪ್ರೊಫೆಸರ್ ಕೆ. ಎಸ್.ಭಗವಾನ್ ಆರೋಪಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಯಜ್ಞ – ಯಾಗಾದಿಗಳಿಗೂ ಗೋವುಗಳನ್ನು ಕೊಲ್ಲಲಾಗುತ್ತಿತ್ತು. ಬ್ರಾಹ್ಮಣರೂ ಕೂಡಾ ದನದ ಮಾಂಸ ತಿನ್ನುತ್ತಿದ್ದರೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ರಾಜ್ಯದಲ್ಲಿ ಯಾವುದೇ ಚರ್ಚೆಯನ್ನು ನಡೆಸದೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿರುವುದು ಸರಿಯಲ್ಲ ಎಂದು ಭಗವಾನ್ ಅಭಿಪ್ರಾಯಪಟ್ಟರು.
ಎಲ್ಲರೂ ತಿಳಿದಿರುವಂತೆ ರೈತರು ಅಶಕ್ತ ಜಾನುವಾರುಗಳನ್ನು ಮಾತ್ರ ಮಾರಾಟ ಮಾಡುತ್ತಾರೆ. ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಿಂದ ರೈತರು ಏನು ಮಾಡಬೇಕು? ಇದರಿಂದ ಅವರಿಗೆ ಹೊರೆಯಾಗುವುದು ನಿಜ. ರೈತರು ತಮ್ಮ ಜಾನುವಾರುಗಳೊಂದಿಗೆ ಯಾವುದೇ ರೀತಿಯ ಭಾವನಾತ್ಮಕ ನಂಟು ಇಟ್ಟುಕೊಂಡಿರುವುದಿಲ್ಲ. ಅಮೆರಿಕಾದಲ್ಲಿ ಕೊಲ್ಲಲೆಂದೇ ದನಗಳನ್ನು ಸಾಕುತ್ತಾರೆ. ಹೀಗಿರುವಾಗ ರಾಜ್ಯದಲ್ಲಿ ಯಾವುದೇ ಚರ್ಚೆಯನ್ನು ನಡೆಸದೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಭಗವಾನ್ ಕಿಡಿಕಾರಿದರು.
ಶೂದ್ರರನ್ನು ಶೂದ್ರರೆಂದು ಕರೆದರೆ ಸಂತಸ ಪಡಬೇಕು ಎಂಬ ಹೇಳಿಕೆ ನೀಡಿದ ಸಂಸದೆ ಪ್ರಗ್ಯಾ ಠಾಕೂರ್ ಹೇಳಿಕೆಯನ್ನು ಖಂಡಿಸಿದ ಭಗವಾನ್, ಪ್ರಗ್ಯಾ ಠಾಕೂರ್‌ಗೆ ಹಿಂದೂ ಧರ್ಮದ ಬಗ್ಗೆಯೇ ಅರಿವಿಲ್ಲ ಎಂದರು. ಹಿಂದೂ ಧರ್ಮವೆಂದರೆ ಕೇವಲ ಬ್ರಾಹ್ಮಣರ ಧರ್ಮವೇ ಹೊರತು, ಬೇರೆಯವರ ಧರ್ಮವಲ್ಲ. ಜನಿವಾರ ಹಾಕಿಕೊಳ್ಳದವರೆಲ್ಲರೂ ಶೂದ್ರರು ಎಂದು ಮನುಸ್ಮೃತಿಯಲ್ಲಿ ಉಲ್ಲೇಖವಾಗಿದೆ. ಅದರ ಪ್ರಕಾರ ಒಕ್ಕಲಿಗರು, ಲಿಂಗಾಯತರು, ಕುರುಬರು, ಉಪ್ಪಾರರು, ನಾಯಕರು ಹಾಗೂ ದಲಿತರೆಲ್ಲರೂ ಶೂದ್ರರೇ ಆಗಿದ್ದಾರೆ ಎಂದು ಭಗವಾನ್ ಅಭಿಪ್ರಾಯಪಟ್ಟರು. ಈ ವಿಚಾರ ಮಾಧ್ಯಮಗಳಲ್ಲಿ ಪ್ರಚಾರವಾದರೆ ನಾನೇ ಈ ಮಾತನ್ನು ಹೇಳಿದ್ದೇನೆಂದುಕೊಂಡು ನನ್ನನ್ನು ಕೊಲ್ಲುವುದಾಗಿ, ಹೊಡೆಯುವುದಾಗಿ ಬೆದರಿಕೆ ಹಾಕುತ್ತಾರೆ. ಇದು ಸರಿಯಲ್ಲ ಎಂದು ಭಗವಾನ್ ಹೇಳಿದರು.