janadhvani

Kannada Online News Paper

‘ಪ್ರವಾದಿ ನಿಂದನೆಗೆ ತಲೆ ಕಡಿಯುದೊಂದೇ ಶಿಕ್ಷೆ’ – ಮಂಗಳೂರಿನಲ್ಲಿ ಮತ್ತೆ ವಿವಾದಿತ ಗೋಡೆ ಬರಹ

ಮಂಗಳೂರು: ನಗರದ ಕೋರ್ಟ್ ರೋಡ್‌, ಜಿಲ್ಲಾ ಕೋರ್ಟ್‌ಗೆ ಸಮೀಪವಿರುವ ಹಳೇ ಪೊಲೀಸ್ ಔಟ್ ಪೋಸ್ಟ್‌ನ ಗೋಡೆಯ ಮೇಲೆ ಕಿಡಿಗೇಡಿಗಳು ಉರ್ದು ಭಾಷೆಯಲ್ಲಿ ‘ಗುಸ್ತಾಕ್-ಎ- ರಸೂಲ್ ಕಿ ಏಕ್ ಹೀ ಸಜಾ, ಸರ್ ತನ್ ಸೇ ಜುದಾ’ ಅಂದರೆ, ‘ಪ್ರವಾದಿ ವಿರುದ್ಧ ನಡೆದರೆ ಒಂದೇ ಶಿಕ್ಷೆ, ತಲೆ ದೇಹದಿಂದ ಬೇರ್ಪಡುವುದು’ ಎಂದು ಬರೆದಿದ್ದಾರೆ.ಎರಡು ದಿನದ ಹಿಂದೆ ನಗರದ ಬಿಜೈ ವಸತಿ ಸಮುಚ್ಚಯ ಕಂಪೌಂಡ್‌ನಲ್ಲಿ ಕಿಡಿಗೇಡಿಗಳು ಉಗ್ರ ಸಂಘಟನೆ ಪರ ಗೋಡೆ ಬರಹ ಬರೆದ ಬೆನ್ನಲ್ಲೇ ಮತ್ತೊಂದು ವಿವಾದಾತ್ಮಕ ಗೋಡೆ ಬರಹ ಕಾಣಿಸಿಕೊಂಡಿದೆ.

ಬಿಜೈ ವಸತಿ ಸಮುಚ್ಚಯ ಕೌಂಪೌಂಡ್‌ನಲ್ಲಿ “Do not force us to invite Lashkar-e-Toiba and Taliban to Deal with Sanghis and Manvedis” ( ಸಂಘ ಪರಿವಾರ ಮತ್ತು ಮನುವಾದಿಗಳೇ ಲಷ್ಕರ್ ತೊಯ್ಬಾ-ತಾಲಿಬಾನ್‌ಗಳನ್ನು ಆಹ್ವಾನಿಸಲು ನಮ್ಮನ್ನು ಒತ್ತಾಯಿಸಬೇಡಿ ) ಎಂದು ಬರೆದಿದ್ದರು. ಈ ಗೋಡೆಬರಹ ಬೆಳಕಿಗೆ ಬರುತ್ತಲೇ, ಕದ್ರಿ ಪೊಲೀಸರು ಗೋಡೆಬರಹವನ್ನು ಅಳಿಸಿ ಹಾಕಿದ್ದರು.

ನಾಗರಿಕರಲ್ಲಿ ಆತಂಕ:
ಇನ್ನು ನಗರದಲ್ಲಿ ಒಂದರ ಹಿಂದೆ ಒಂದು ಉಗ್ರ ಬರಹ ಪತ್ತೆಯಾಗುತ್ತಿದ್ದಂತೆ, ನಗರದ ಜನತೆ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಉಗ್ರ ಬರಹ ವಿರುದ್ಧ ಸಾಮಾಜಿಕ ಜಾಲ ತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.ಉಗ್ರ ಚಟುವಟಿಕೆಗಳನ್ನು ಆರಂಭದಲ್ಲೇ ಚಿವುಟುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟಿರುವ ಜನ, ನಗರದ ಗೋಡೆಗಳ ಮೇಲೆ ಉಗ್ರ ಬರಹ ಬರೆಯುತ್ತಿರುವವರನ್ನು ಪತ್ತೆ ಮಾಡಿ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.

error: Content is protected !! Not allowed copy content from janadhvani.com